ತುಮಕೂರು ; ಬಸವ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ

ತುಮಕೂರು; 890ನೇ ಬಸವ ಜಯಂತಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಬಸವ ಜಯಂತಿ ಹಬ್ಬವು ಏಪ್ರಿಲ್ 23 ರಂದು ಆಚರಣೆ ಮಾಡಲಾಗುವುದರ ಹಿನ್ನೆಲೆಯಲ್ಲಿ ಏಪ್ರಿಲ್ 22 ರ ಸಂಜೆ 5 ಗಂಟೆಯಿಂದ 23 ರ ಮಧ್ಯರಾತ್ರಿ 12 ರ ವರೆಗೆ ಮಾಂಸ ಮಾರಾಟ ಹಾಗೂ ಸಂಗ್ರಹಣೆ ಮಾಡುವುದನ್ನು ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಸಯಿಖಾನೆಗಳು ಹಾಗೂ ಮಾಂಸ ಮಾರಾಟ ಮಾಡುವ ಎಲ್ಲಾ ರೀತಿಯ ಮಳಿಗೆಗಳನ್ನು ಮುಚ್ಚಬೇಕು ಎಂದು ಪಾಲಿಕೆ ಅರೋಗ್ಯಧಿಕಾರಿ ಡಾ. ಮದಕರಿ ನಾಯಕ ಅವರು ತಿಳಿಸಿದ್ದಾರೆ.