ನಂದಿ ಬೆಟ್ಟದ ಪ್ರವೇಶದ ಸಮಯ ಬದಲಾವಣೆ: ಸೆ.30 ರ ವರೆಗೆ ಅನ್ವಯ

ಚಿಕ್ಕಬಳ್ಳಾಪುರ : ಐತಿಹಾಸಿಕ ಪ್ರಸಿದ್ಧವಾದ ನಂದಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಇನ್ನಷ್ಟು ಸಮಯ ಹೆಚ್ಚಿಸಿದ ಜಿಲ್ಲಾಧಿಕಾರಿ ಎನ್.ಎಮ್. ನಾಗರಾಜ್.

ಸಾಂಕ್ರಾಮಿಕ ರೋಗ ಕೊರೊನಾ ಹಿನ್ನೆಲೆಯಲ್ಲಿ ಪ್ರವೇಶದ ಸಮಯವನ್ನು ಬದಲಾವಣೆ ಮಾಡಲಾಗಿತ್ತು , ಆದರೆ ಈಗ ಬೆಳಗ್ಗೆ 5 ರಿಂದ ಸಂಜೆ 7 ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಐತಿಹಾಸಿಕ ಸ್ಥಳ ನಂದಿ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ಹಾಗೂ ಸೂರ್ಯೋದಯವನ್ನು ವೀಕ್ಷಣೆ ಮಾಡಲು ಬರುತ್ತಿದ್ದ ಪ್ರವಾಸಿಗರಿಗೆ ಬೆಳಗ್ಗೆ 6 ಗಂಟೆಗೆ ಪ್ರವೇಶ ಸಿಗುತ್ತಿತ್ತು ಆದ್ದರಿಂದ ಸೂರ್ಯೋದಯವನ್ನು ನೋಡಲು ಅವಕಾಶ ಸಿಗುತ್ತಿರಲಿಲ್ಲ, ಆದರೆ ನಂದಿಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷರ ಆದೇಶದ ಮೇರೆಗೆ ಜಿಲ್ಲಾಧಿಕಾರಿ ನಾಗರಾಜ್ ಅವರು ಪ್ರವೇಶದ ಸಮಯವನ್ನು ಬದಲಾಯಿಸಿದ ನಂತರ ಪ್ರವಾಸಿಗರಿಗೆ ಸೂರ್ಯೋದಯದ ದೃಶ್ಯ ಹಾಗೂ ಇನ್ನಷ್ಟು ಹೆಚ್ಚಿನ ಸಮಯವನ್ನು ನಂದಿಗಿರಿಧಾಮದಲ್ಲಿ ಕಳೆಯಲು ಅನುವು ಮಾಡಿಕೊಟ್ಟಂತಾಗಿದೆ.

ಈ ವಿಸ್ತರಣೆ ಸೆ.30 ರವರೆಗೆ ಅನ್ವಯ ಆಗಲಿದೆ ಎಂದು ತಿಳಿಸಿದ್ದಾರೆ.