ಒಂದೇ Whatsapp ಖಾತೆಯನ್ನು ಈಗ 4 ಸಾಧನಗಳಲ್ಲಿ ಬಳಸಬಹುದು ಎಂದು ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಈಗಾಗಲೇ ಬಳಕೆ ಮಾಡುತ್ತಿರುವ ಫೋನ್ ಅಲ್ಲದೆ ಇನ್ನೂ 3 ಫೋನ್ ಅಥವಾ ಟ್ಯಾಬ್ಲೆಟ್, ಕಂಪ್ಯೂಟರ್ ಮೂಲಕ ಲಾಗ್ ಇನ್ ಮಾಡಿ ಏಕಕಾಲದಲ್ಲಿ ಬಳಸಲು ಅವಕಾಶವನ್ನು ಮಾಡಿದ್ದಾರೆ.

ಮೊದಲ ಫೋನ್ ಪ್ರಾಥಮಿಕವಾಗಿದ್ದು ಇನ್ನುಳಿದ ಫೋನ್ ಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಲಾಗ್ ಇನ್ ಮಾಡಬಹುದು, ಮುಂದಿನ ದಿನಗಳಲ್ಲಿ ಎಲ್ಲಾ ಸಾಧನಗಳಿಗೂ ಒಟಿಪಿ ಬಳಸಿ ಲಾಗ್ ಇನ್ ಮಾಡಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ವಾಟ್ಸ್ ಆಪ್ ಸಂಸ್ಥೆ ತಿಳಿಸಿದೆ.