ಚುನಾವಣಾ ಅಕ್ರಮ ಕಂಡಲ್ಲಿ cVIGIL ಆಪ್ ಮೂಲಕ ದೂರು ನೀಡಿ

ತುಮಕೂರು: ವಿಧಾನಸಭಾ ಚುನಾವಣೆ-2023 ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದಿಂದ ಆನ್ ಲೈನ್ ಮೂಲಕ ದೂರುಗಳನ್ನು ದಾಖಲಿಸಲು cVIGIL ಆಪ್ ಅನ್ನು ಬಿಡುಗಡೆಗೊಳಿಸಿದ್ದಾರೆ.

ಚುನಾವಣಾ ಅಕ್ರಮಗಳಾದ ಹಣ ವಿತರಣೆ, ಉಡುಗೊರೆ,ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿಇಲ್ಲದ ಪೋಸ್ಟರ್‌ಗಳು/ಬ್ಯಾನರ್‌ಗಳ ಅಳವಡಿಕೆ,ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ,ಅನುಮತಿ ಇಲ್ಲದ ವಾಹನ ಅಥವಾ ಬೆಂಗಾವಲುಗಳು,ಆಸ್ತಿ ವಿರೂಪ, ಮತದಾನದ ದಿನದಂದು ಮತದಾರರ ಸಾಗಣಿ, ಮತಗಟ್ಟೆಯ 200 ಮೀ. ವ್ಯಾಪ್ತಿಯಲ್ಲಿನಪ್ರಚಾರ, ನಿಷೇಧಿತ ಅವಧಿಯಲ್ಲಿ ಪ್ರಚಾರ, ಧಾರ್ಮಿಕ ಅಥವಾ ಕೋಮು ಭಾಷಣ/ಸಂದೇಶಗಳು, ಸಮಯಕ್ಕೆ ಸೀಮಿತ ದ್ವನಿವರ್ಧಕಗಳ ಬಳಕೆ ಮತ್ತು ಘೋಷಣೆ ಇಲ್ಲದೆ ಪೋಸ್ಟರ್ ಬಳಸುವುದು ಚುನಾವಣಾ ನೀತಿಸಂಹಿತೆಗೆ ವಿರುದ್ಧವಾಗಿರುವುದರಿಂದ ಅಂತಹ ಅಕ್ರಮ ಕಂಡಂತೆ ಚಿತ್ರೀಕರಿಸಿ ದೂರು ದಾಖಲಿಸಲು ಅವಕಾಶ ಇರುತ್ತದೆ.

ಸಾರ್ವಜನಿಕರಿಗೆ ಮೇಲೆ ತಿಳಿಸಿರುವ ಚುನಾವಣಾ ಅಕ್ರಮಗಳು ಕಂಡಲ್ಲಿ cVIGIL Mobile ಆಪ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡುವ ಮೂಲಕ ದೂರು ದಾಖಲಿಸಲು ಸಹ ಅವಕಾಶವಿದೆ. ದೂರು ದಾಖಲಿಸಿದ ಸ್ಥಳಕ್ಕೆ ಜಿಲ್ಲಾ/ತಾಲ್ಲೂಕು ಚುನಾವಣಾಧಿಕಾರಿಗಳಿಂದ ನೇಮಕವಾಗಿರುವ FST (Flying SquadTeam) & SST (Static ServeillanceTeam)ಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಕೈಗೊಂಡು ವರದಿಯನ್ನು RO ಗಳಿಗೆ ಸಲ್ಲಿಸುತ್ತಾರೆ ಈ ಎಲ್ಲಾ ಪ್ರಕ್ರಿಯೆಗಳು 100 ನಿಮಿಷಗಳೊಳಗೆ ಪೂರ್ಣಗೊಳ್ಳುವುದು.

ಚುನಾವಣಾ ಅಕ್ರಮವನ್ನು ತಡೆಯುವ ಉದ್ದೇಶದಲ್ಲಿ ಸಾರ್ವಜನಿಕರು Google Play store ನಿಂದ cVIGIL Citizen Mobile App ಅನ್ನು ಡೌನ್ಲೋಡ್ ಮಾಡಿಕೊಂಡು ಚುನಾವಣಾ ಅಕ್ರಮ ಕಂಡುಬಂದಲ್ಲಿ ದೂರು ದಾಖಲಿಸಲು ಚುನಾವಣಾ ಅಧಿಕಾರಿಗಳು ಮನವಿ ಮಾಡಿದ್ದಾರೆ.