ಗುಬ್ಬಿ : ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ನಾಗರಿಕರು ಭರ್ಜರಿ ರೆಸ್ಪಾನ್ಸ್ ನೀಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಸ್. ಡಿ. ದಿಲೀಪ್ ಕುಮಾರ್ ಅವರು ಹೇಳಿದ್ದಾರೆ.
ಇಲ್ಲಿನ ಶಾಸಕರು ಯಾವುದೇ ಭಾಗದ ಗ್ರಾಮಗಳಲ್ಲಿ ಅಭಿವೃದ್ಧಿಯನ್ನು ಮಾಡಿರುವುದು ಕಂಡುಬದಿಲ್ಲ ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ ಹಾಗೂ ಈ ಬಾರಿ ಬದಲಾವಣೆಯನ್ನು ಮಾಡಿ ಬಿಜೆಪಿ ಪಕ್ಷವನ್ನು ಆಡಳಿತಕ್ಕೆ ತರಲೇಬೇಕೆಂದು ಕ್ಷೇತ್ರದ ಜನತೆ ಪಣ ತೊಟ್ಟಿದ್ದಾರೆ.

ಇಂದು ಬಿದರೆ ಪಂಚಾಯಿತಿ ಹಾಗೂ ಇರಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲೂ ಪ್ರಚಾರ ಮಾಡಿದ ದಿಲೀಪ್ ಕುಮಾರ್ ಅವರಿಗೆ ಪ್ರತಿ ಗ್ರಾಮಗಳಲ್ಲೂ ಸಹ ಬೆಂಬಲವನ್ನು ನೀಡುತ್ತಿದ್ದಾರೆ, ಸಾವಿರಾರು ಗ್ರಾಮಸ್ತರು ಪ್ರಚಾರದಲ್ಲಿ ಪಾಲ್ಗೊಂಡು ಅಭ್ಯರ್ಥಿ ದಿಲೀಪ್ ಕುಮಾರ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.