ಅರೋಗ್ಯಧಿಕಾರಿ ಬಂಧನ : 30,000 ರೂ ಲಂಚ ಪ್ರಕರಣ

ಬೆಂಗಳೂರು : ಬಿಬಿಎಂಪಿ ಅರೋಗ್ಯಧಿಕಾರಿಯಾದ ಶಿವೇಗೌಡ ಅವರನ್ನು 30,000 ರೂ ಲಂಚ ಪ್ರಕರಣದಲ್ಲಿ ಈಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಲಕ್ಷ್ಮೀನರಸಿಂಹಸ್ವಾಮಿ ಎಂಟರ್ ಪ್ರೈಸೆಸ್ ಮಾಲೀಕ ಶ್ರೀನಿವಾಸಲು ಅವರು ಸೊಳ್ಳೆಗಳ ನಿಯಂತ್ರಣಕ್ಕೆ ಸಿಂಪಡಿಸಿದ್ದ ಔಷದಿಯ ಬಿಲ್ ಅನ್ನು ಮಂಜೂರು ಮಾಡಿಸಿಕೊಳ್ಳಲು ಸಿ.ವಿ.ರಾಮನ್ ನಗರದ ಅರೋಗ್ಯಧಿಕಾರಿ ಶಿವೇಗೌಡ ಅವರ ಬಳಿ ಹೋದಾಗ 30,000 ರೂ ಲಂಚ ನೀಡಿದರೆ ಮಾತ್ರ ಬಿಲ್ ಮಂಜೂರು ಮಾಡುವುದಾಗಿ ಹೇಳುತ್ತಾರೆ. ನಂತರ ಶ್ರೀನಿವಾಸುಲು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದಾರೆ, ಗುರವಾರ ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಸತೀಶ್ ನೇತೃತ್ವ ತಂಡ ದಾಳಿ ನೆಡೆಸಿ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಬಂಧಿಸಿ ತನಿಖೆ ನೆಡುಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.