ಭಯೋತ್ಪಾದಕರು ಬಳಸುತ್ತಿದ್ದ 14 ಮೆಸ್ಸೆಂಜರ್ ಆ್ಯಪ್‌ ನಿಷೇಧ

ಪಾಕಿಸ್ತಾನದಲ್ಲಿನ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿನ ತಮ್ಮ ಬೆಂಬಲಿಗರೊಂದಿಗೆ ಮಾಹಿತಿ ರವಾನೆ ನೆಡೆಸಲು ಹೆಚ್ಚಾಗಿ ಬಳಸುತ್ತಿದ್ದ 14 ಮೆಸ್ಸೆಂಜರ್ ಅಪ್ಲಿಕೇಶನ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಸೆಕ್ಷನ್ 69A ಅಡಿಯಲ್ಲಿ ಕೇಂದ್ರ ಸರ್ಕಾರ ರಾಷ್ಟೀಯ ಭದ್ರತೆಯ ದೃಷ್ಟಿಯಿಂದ ಅಪ್ಲಿಕೇಶನ್ ಗಳನ್ನು ನಿಷೇಧಸಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರವು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ಸಾರ್ವಜನಿಕ ಸುವ್ಯವಸ್ಥೆಯ ಪೂರ್ವಕವಾಗಿ 250 ಚೀನೀ ಅಪ್ಲಿಕೇಶನ್ ಗಳನ್ನು ನಿಷೇಧಸಲಾಗಿತ್ತು.

ಭಯೋತ್ಪಾದಕರು ಬಳಸಿ ನಿಷೇಧಿಸಲ್ಪಟ್ಟ ಅಪ್ಲಿಕೇಶನ್ ಗಳು Crypviser, Enigma, Safeswiss, Wickrme, Mediafire, Briar, BChat, Nandbox, Conion, IMO, Element, Second line, Zangi ಮತ್ತು Threema.