ತುಮಕೂರು : ನಗರದ ಪ್ರತಿಷ್ಟಿತ SIT ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ದೇವರಾಯನದುರ್ಗಕ್ಕೆ ತೆರಳುವಾಗ ಭೀಕರ ಅಪಘಾತವಾಗಿದೆ.
ಐದು ಜನ ಸ್ನೇಹಿತರೆಲ್ಲ ಸೇರಿ ದೇವರಾಯನದುರ್ಗಕ್ಕೆoದು ಪ್ರವಾಸ ಹೊರಟು ಕಾರಿನಲ್ಲಿ ಹೋಗುವಾಗ ನಾಮದಚಿಲುಮೆ ಹತ್ತಿರ, ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು ಆದಿತ್ಯ ಎನ್ನುವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಹಾಗೂ ಇನ್ನುಳಿದ ನಾಲ್ವಾರು ಗಂಭೀರ ಸ್ಥಿತಿಯಲ್ಲಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅದರಲ್ಲಿ 3 ವಿದ್ಯಾರ್ಥಿಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ.
ಆದಿತ್ಯ (ಮೃತ ವಿದ್ಯಾರ್ಥಿ)
ಗಣೇಶ್, ಪಂಡಿತ್ ಭಾರಧ್ವಜ್, ಅಕುಲ್ ಹಾಗೂ ತೇಜಸ್ ಗಾಯಳುಗಳು .
ಅತೀ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ರಭಸವಾಗಿ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.