ಗುಬ್ಬಿ : ವಿಧಾನಸಭಾ ಚುನಾವಣೆ ಕಣ ಈಗಾಗಲೇ ರಂಗೇರಿದ್ದು, ಗುಬ್ಬಿ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಎಸ್.ಡಿ ದಿಲೀಪ್ ಕುಮಾರ್ ಅವರಿಗೆ ಈಗಾಗಲೇ ಭರ್ಜರಿಯಾಗಿ ರೆಸ್ಪಾನ್ಸ್ ನೀಡುತ್ತಿದ್ದಾರೆ.

ಗುಬ್ಬಿ ವಿಧಾನ ಸಭಾ ಕ್ಷೇತ್ರದ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಸಭೆಯು ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಸ್ವಾಮಿ ರವರು,ಅಂಬೇಡ್ಕರ್ ಅವರು ಚುನಾವಣೆ ಯಲ್ಲಿ ನಿಂತ್ತಿದ್ದಾಗ ಸೋಲಿಸಿದ್ದು ಕಾಂಗ್ರೆಸ್ ಪಕ್ಷದವರು ಅದನ್ನ ತಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು, ಕಾಂಗ್ರೆಸ್ ಪಕ್ಷದ ಒಂದು ತಲೆ ಮಾರು ಅಂಬೇಡ್ಕರ್ ಬಗ್ಗೆ ಚರ್ಚೆಯೇ ಮಾಡಲಿಲ್ಲ ಈಗ ಮಾತ್ರ ಚುನಾವಣೆ ಇರುವ ಕಾರಣ ದಲಿತರ ಮತಗಳನ್ನು ಸೆಳೆಯುವುದಕ್ಕಾಗಿ ನಾಟಕವಾಡುತ್ತಿದ್ದಾರೆ ಆದರೆ ಬಿಜೆಪಿ ಯು ಅಧಿಕಾರದಲ್ಲಿದ್ದಾಗ ದಲಿತರಿಗೆ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿದೆ, ಕೇಂದ್ರ ಸರ್ಕಾರದ ಯೋಜನೆಗಳಾದ ವಿದ್ಯಾನಿಧಿ ಮೂಲಕ ನೇರವಾಗಿ ವಿದ್ಯಾರ್ಥಿಗಳ ಅಕೌಂಟ್ ಗೆ ಹಣ ಹೋಗುತ್ತಿದೆ ಮೋದಿ ಸರ್ಕಾರ ಸಕಲ ಸೌಲಭ್ಯ ನೀಡುತ್ತಿದೆ , ಶೋಷಿತ ವರ್ಗದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಬಿ.ಎಸ್ ಯಡಿಯೂರಪ್ಪನವರ ಸರ್ಕಾರ ಭಾಗ್ಯ ಲಕ್ಷ್ಮಿ ಯೋಜನೆ, ವಸತಿ ನಿಲಯ, ದಲಿತರ ಕುಟುಂಬ ಗಳಿಗೆ ವಿಧವೆ ಮಾಶಾಸನಾ ಸೇರಿದಂತೆ 10 ಹಲವು ಕಾರ್ಯಯೋಜನೆಗಳನ್ನು ರೂಪಿಸಿ ದಲಿತರಿಗೆ ನ್ಯಾಯ ಒದಗಿಸಿದೆ,ನಾವು ಒಳಮೀಸಲಾತಿ ಹೆಚ್ಚಳ ಮಾಡಿ ಎಂದು ಕಳೆದ 37 ವರ್ಷಗಳಿಂದ ಹೋರಾಟ ಮಾಡಿದ್ದೇವೆ ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಲಿಲ್ಲ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶೇಕಡ 17ರಷ್ಟು ಮೀಸಲಾತಿ ಹೆಚ್ಚು ಮಾಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ನಾವು ಎಂದಿಗೂ ಮರೆಯಬಾರದು, ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ S.D ದಿಲೀಪ್ ಕುಮಾರ್ ಅವರು ಮಾತನಾಡಿ ಎಲ್ಲಾ ಸಮುದಾಯಗಳು ಈ ಬಾರಿ ನನಗೆ ಬೆಂಬಲ ಸೂಚಿಸುತ್ತಿದ್ದೀರಾ ಅದಕ್ಕೆ ನಾನು ನಿಮಗೆಲ್ಲ ಆಭರಿಯಾಗಿದ್ದೇನೆ ಎಂದರು, ಹಾಗೆ ದಲಿತರು ಯಾವತ್ತೂ ಸಹ ಮರೆಯಬಾರದು ದಲಿತರನ್ನು ವೋಟ್ ಬ್ಯಾಂಕ್ ಅನ್ನಾಗಿ ಮಾಡಿಕೊಂಡು 20 ವರ್ಷಗಳಿಂದ ಅಭಿವೃದ್ಧಿ ವಂಚಿತ ತಾಲ್ಲೋಕನ್ನಾಗಿ ಮಾಡಿದ್ದಾರೆ, ಕಾಲೋನಿಗಳಲ್ಲಿ ಹಾಗೂ ಅನೇಕ ಕಡೆಯಲ್ಲಿ ಮೂಲಭೂತ ಸೌಕರ್ಯಗಳು ದೊರೆಯದೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ, ಆದ್ದರಿಂದ ಈ ಬಾರಿ ನಿಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ನನ್ನನ್ನು ಆಶೀರ್ವದಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ, ನಿಮ್ಮ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸದಾ ಶ್ರಮಿಸುತ್ತೇನೆ ಎಂದು ಹೇಳಿದರು.