ಮೈಸೂರು : ಬಲರಾಮ (67) ಆನೆಯು ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಬರೋಬ್ಬರಿ 14 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಖ್ಯಾತಿ ಗಳಿಸಿತ್ತು.
ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಬಲರಾಮನಿಗೆ ಗಂಟಲಲ್ಲಿ ಹುಣ್ಣಾಗಿದ್ದ ಕಾರಣ ಬಲರಾಮ ಆನೆಯು ದಿನಾಂಕ 1/5/23 ರಿಂದ ಯಾವುದೇ ಆಹಾರ ನೀರು ಸೇವಿಸಲು ಆಗದಂತಹ ಸ್ಥಿತಿ ಉಂಟಾಗಿತ್ತು, ಪರಿಣಾಮ ಅರೋಗ್ಯದಲ್ಲಿ ಏರುಪೇರಾಗಿ ಆನೆಯು ನಿತ್ರಾಣಗೊಂಡಿತ್ತು, ಆನೆಗೆ ಪಶು ವೈದ್ಯರು ಶಿಬಿರದಲ್ಲೇ ಚಿಕಿತ್ಸೆ ನೀಡುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಲರಾಮ ಆನೆಯ 7/5/23 ರ ಸಂಜೆ ಸುಮಾರು 5:15 ರ ಸಮಯದಲ್ಲಿ ಕೊನೆಯುಸಿರೆಳದಿದೆ.