ಗುಬ್ಬಿ : ವಿಧಾನಸಭಾ ಚುನಾವಣೆ ಕದನ ರಂಗೇರಿದ್ದು ತ್ರಿಕೋನ ಪೈಪೋಟಿ ಏರ್ಪಟ್ಟಿದೆ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನ ಮೂರು ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.
20 ವರ್ಷಗಳನ್ನು ಪೋರೈಸಿ ಮತ್ತೊಮ್ಮೆ ಶಾಸಕನಾಗಬೇಕೆನ್ನುವ ಹಂಬಲದಿಂದ ಗುಬ್ಬಿ ಶಾಸಕ ಎಸ್. ಆರ್ ಶ್ರೀನಿವಾಸ್ ಮನೆ ಮನೆ ಸುತ್ತುತ್ತಿದ್ದಾರೆ ಆದರೆ ಕ್ಷೇತ್ರದ ಜನತೆಯಾವುದೇ ರೀತಿಯ ಅಭಿವೃದ್ಧಿಯನ್ನು ಮಾಡಿಲ್ಲವೆಂದು ಶ್ರೀನಿವಾಸ್ ವಿರುದ್ಧ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿರುವ ನಾಗರಾಜ್ ಅವರು ಕ್ಷೇತ್ರದ ಜನತೆಗೆ ಹೊಸ ಪರಿಚಯವಾಗಿದ್ದಾರೆ. ಬಿಜೆಪಿ ಪಕ್ಷದಿಂದ ಹೊರ ಬಂದ ಬೆಟ್ಟಸ್ವಾಮಿ ಅವರ ಬೆಂಬಲದಿಂದ ನಾಗರಾಜ್ ಅವರಿಗೆ ಸ್ವಲ್ಪ ಬಲ ಬಂದಿರುವ ಹಾಗೆ ಕಾಣಿಸುತ್ತಿದೆ.
ಈ ಬಾರಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿರುವ ಎಸ್. ಡಿ ದಿಲೀಪ್ ಕುಮಾರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು 30,528 ಮತಗಳನ್ನು ಪಡೆದು ಎಲ್ಲರ ಗಮನ ಸೆಳೆದಿದ್ದರು, ಆದರೆ ಈ ಬಾರಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಕ್ಕಿರುವ ಕಾರಣ ಗೆಲ್ಲುವ ನೀರೀಕ್ಷೆ ಹೆಚ್ಚಾಗಿದೆ ಎಂದು ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ.
ಈ ಬಾರಿ ಕುತೂಹಲ ಉಂಟುಮಾಡಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದತ್ತ ಎಲ್ಲರ ಗಮನವಿದ್ದು ಕ್ಷೇತ್ರದ ಜನತೆ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.