ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ರ ನೀತಿ ಸಂಹಿತೆ ಜಾರಿಯಾದ ನಂತರ FLYING SQUAD ಮೂಲಕ 230 ಕೋಟಿ ರೂ ಹಾಗೂ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಚುನಾವಣಾ ಆಯೋಗ ಸೂಚನೆ ಮೇರೆಗೆ ಮಾರ್ಚ್ 29 ರ ನಂತರ FLYING SQUAD ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ, 2700 ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದ್ದು 230 ಕೋಟಿ ನಗದನ್ನು ವಶ ಪಡಿಸಿಕೊಂಡಿದ್ದೇವೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 69 ಕೋಟಿ ರೂ ಜಪ್ತಿ ಮಾಡಲಾಗಿತ್ತು ಆದರೆ ಈ ಬಾರಿ 4ಪಟ್ಟು ಹೆಚ್ಚಾಗಿ ವಶ ಪಡಿಸಲಾಗಿದೆ ಎಂದು ಹೇಳಿದರು.