ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಇನ್ನು ಕೆಲವೇ ಗಂಟೆಗಳು ಬಾಕಿ ಇದೆ, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ಅತೀ ವೇಗವಾಗಿ ಪ್ರಚಾರಗೋಳ್ಳುತ್ತಿದೆ.
ಕರ್ನಾಟಕದ ನನ್ನ ಸಹೋದರ ಸಹೋದರಿಯರೇ ನಮಸ್ಕಾರ ಸದಾಕಾಲ ನನ್ನ ಮೇಲೆ ನಿಮ್ಮ ಪ್ರೀತಿಯ ಮಳೆಯನ್ನೇ ಸುರಿಸಿದ್ದೀರಿ ಇದು ನನಗೆ ನಿಮ್ಮ ಆಶೀರ್ವಾದದಂತೆ ಭಾಸವಾಗುತ್ತಿದೆ.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಕನ್ನಡಿಗರ ಘೋಷಣೆಯು ಈಗಲೂ ನನ್ನ ಕಿವಿಯಲ್ಲಿ ಮೊಳಗುತ್ತಿದೆ, ಸ್ವಾತಂತ್ರ್ಯೋತ್ಸವದ ಅಮೃತಕಾಲದ ಹೊಸ್ತಿಲಲ್ಲಿ ನಿಂತಿರುವ ನಾವು ನಮ್ಮ ಪ್ರೀತಿಯ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದೇವೆ, ಈ ನಿಟ್ಟಿನಲ್ಲಿ ಕರ್ನಾಟಕ ಮುಂದಾಳತ್ವ ವಹಿಸಿದೆ. ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು ನಮ್ಮ ಮುಂದಿನ ಗುರಿ 3ನೇ ಸ್ಥಾನಕ್ಕೆ ತಲುಪುವುದಾಗಿದೆ. ಕರ್ನಾಟಕ 1ಟ್ರಿಲಿಯನ್ ಡಾಲರ್ ಆರ್ಥಿಕತೆ ಬೆಳವಣಿಗೆ ಸಾಧಿಸಿದರೆ ಮಾತ್ರ ನಾವು ಈ ಗುರಿ ಸಾಧಿಸಲು ಸಾಧ್ಯ.
ಕರ್ನಾಟಕದಲ್ಲಿ ಕಳೆದ ಮೂರುವರೆ ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರದ ಕೆಲಸಗಳನ್ನು ನೋಡಿದ್ದೀರಿ ಬಿಜೆಪಿ ಸರ್ಕಾರದ ನಿರ್ಣಾಯಕ ದೂರದೃಷ್ಟಿ ನೀತಿ ನಿರೂಪಣೆಯಿಂದಾಗಿ ಕರ್ನಾಟಕದ ಆರ್ಥಿಕತೆಯು ವೇಗ ಪಡೆಯುತ್ತಿದೆ, ವಿಶ್ವವನ್ನು ಕಾಡಿದ ಕೋವಿಡ್ ಸಂಕಷ್ಟದ ನಡುವೆಯೂ ಬಿಜೆಪಿ ಸರ್ಕಾರದಡಿ ಕರ್ನಾಟಕವು ಪ್ರತಿ ವರ್ಷ 90 ಸಾವಿರ ಕೋಟಿ ರೂ ಮೊತ್ತದ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ. ಆದರೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇದು ಕೇವಲ ರೂ.30,000 ಕೋಟಿ ರೂಪಾಯಿಗಳ ಆಸು ಪಾಸಿನಲ್ಲಿತ್ತು. ಇದು ಕರ್ನಾಟಕದ ಅಭಿವೃದ್ಧಿ ಹಾಗೂ ಯುವಜನರ ಉಜ್ವಲಕ್ಕಾಗಿ ಬಿಜೆಪಿಗೆ ಇರುವ ಬದ್ಧತೆಗೆ ಸಾಕ್ಷಿ.
ಹೂಡಿಕೆ, ಕೈಗಾರಿಕೆ ಮತ್ತು ಆವಿಷ್ಕಾರದಲ್ಲಿ ಕರ್ನಾಟಕವನ್ನು ನಂ.1 ಮಾಡುವುದು ನಮ್ಮ ಆದ್ಯತೆ.
ಶಿಕ್ಷಣ,ಉದ್ಯೋಗ ಮತ್ತು ಉದ್ಯೋಗಶೀಲತೆಯಲ್ಲಿ ಕರ್ನಾಟಕವನ್ನು ನಂ. 1 ಮಾಡುವುದು ನಮ್ಮ ಧ್ಯೇಯ.
ಬಿತ್ತುವ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ರೈತರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ, ಹೊಸ ನೀರಾವರಿ ಯೋಜನೆಗಳು, ಧಾನ್ಯ ಸಂಗ್ರಹಣ ವ್ಯವಸ್ಥೆ, ಎಥೆನಾಲ್ ಮಿಶ್ರಣ, ನ್ಯಾನೋ ಯೂರಿಯಾ, ಡ್ರೋನ್ ನಂತಹ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಬಿಜೆಪಿಯು ಕೃಷಿ ವಲಯದಲ್ಲಿ ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಕಠಿಣ ಬದ್ಧವಾಗಿದೆ.
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರವು ಸಾರಿಗೆ ಸಂಪರ್ಕ, ಸುಲಲಿತ ಜೀವನ, ಸುಲಲಿತ ವ್ಯವಹಾರಗಳಿಗೆ ಒತ್ತು ನೀಡಿ ತೆಗೆದುಕೊಂಡ ನಿರ್ಧಾರಗಳು, ಪ್ರಾರಂಭಿಸಿದ ಯೋಜನೆಗಳು ರಾಜ್ಯವನ್ನು ನಂ. 1 ಮಾಡುವಲ್ಲಿ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿದೆ.
ಕರ್ನಾಟಕದ ಶ್ರೀಮಂತಿಕೆಯ ಪರಂಪರೆಯು ಇಡೀ ದೇಶಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಪ್ರೇರಣದಾಯಕವಾಗಿದೆ, ಜಗಜ್ಯೋತಿ ಬಸವೇಶ್ವರರು, ನಾಡಪ್ರಭು ಕೆಂಪೇಗೌಡರು,ಶ್ರೀ ಕನಕದಾಸರು, ಒನಕೆ ಓಬವ್ವನಂತಹ ಮಹಾನೀಯರನ್ನು ನೀಡಿದ ನಾಡಿದು, ಅವರ ತತ್ವ ಆದೇಶದಂತೆ ನಡೆಯುತ್ತಿರುವ ಬಿಜೆಪಿ, ನವ ಕರ್ನಾಟಕ ನಿರ್ಮಿಸುವ ಮೂಲಕ ಆ ಮಹನೀಯರಿಗೆ ಗೌರವ ಸಲ್ಲಿಸುತ್ತಿದೆ.
ಕರ್ನಾಟಕದ ಎಲ್ಲಾ ನಗರಗಳಲ್ಲಿ ಮೂಲಸೌಕರ್ಯದ ಅಭಿವೃದ್ಧಿಗಳು, ಸಂಚಾರ ವ್ಯವಸ್ಥೆಯ ಆಧುನೀಕರಣ, ಹಳ್ಳಿ ಹಾಗೂ ನಗರಗಳಲ್ಲಿ ಗುಣಮಟ್ಟದ ಜೀವನ, ಮಹಿಳೆಯರು ಮತ್ತು ಯುವ ಜನಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಬಿಜೆಪಿ ಸರ್ಕಾರವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ.
ಕರ್ನಾಟಕ ಜನರ ಕನಸು ನನ್ನ ಕನಸು, ನಿಮ್ಮ ಸಂಕಲ್ಪ ನನ್ನ ಸಂಕಲ್ಪ ಇವೆಲ್ಲವನ್ನೂ ಸಹಕಾರ ಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೈಜೋಡಿಸಿದರೆ ವಿಶ್ವದ ಯಾವ ಶಕ್ತಿಯು ನಮ್ಮನ್ನು ತಡೆಯಲಾರದು ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿಸುವ ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದವಿರಲಿ.
ಕರ್ನಾಟಕ ಸಮೃದ್ಧಿ ಮತ್ತು ಪ್ರಗತಿಪಥದಲ್ಲಿ ಮುನ್ನಡೆಯಲು ಪ್ರಾರ್ಥಿಸುತ್ತೇನೆ, ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿಸಲು ಜವಾಬ್ದಾರಿಯುತ ನಾಗರಿಕರಾದ ನೀವು ಮೇ10 ರಂದು ಮತದಾನ ಮಾಡುವಂತೆ ನಿಮ್ಮೆಲ್ಲರನ್ನು ಕೋರುತ್ತಿದ್ದೇನೆ.ಕರ್ನಾಟಕದ ಉಜ್ವಲ ಭವಿಷ್ಯ ಅದರಲ್ಲೂ ವಿಶೇಷವಾಗಿ ನಿಮ್ಮ ಕುಟುಂಬ ಮತ್ತು ಯುವ ಜನರಿಗಾಗಿ ಈ ಮನವಿಯನ್ನು ಮಾಡುತ್ತಿದ್ದೇನೆ.
ನಿಮ್ಮ ಮಿತ್ರ ನರೇಂದ್ರ ಮೋದಿ.
ಎಂದು ಸಂದೇಶವನ್ನು ರವಾನಿಸಿದ್ದಾರೆ.