ಬಿಜೆಪಿ ಸೋಲಿಗೆ ಕಾರಣವೇನು ?ಹಸ್ತಾಧಿಕಾರದಲ್ಲಿ ಯಾರಿಗೆ ಯಾವ ಸ್ಥಾನ ?

ವಿಧಾನಸಭಾ ಚುನಾವಣೆಯಲ್ಲಿ ಈ ಭಾರಿ ಕೇವಲ 66 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದ್ದು ಇನ್ನುಳಿದ ಕ್ಷೇತ್ರಗಳಲ್ಲಿ ಬಾರಿ ಸೋಲನ್ನು ಅನುಭವಿಸಿದೆ, ಸಚಿವರುಗಳಾಗಿದ್ದವರೇ ಸೋಲನ್ನು ನೋಡುವಂತಾಗಿದೆ.

ಬಿಜೆಪಿ ಸೋಲಿಗೆ ಕಾರಣ?

  • ಯಡಿಯೂರಪ್ಪ ನವರನ್ನು ಹೀನಾಯವಾಗಿ ಕೆಳಗಿಳಿಸಿದ್ದು.
  • ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳದೆ ಇರುವುದು.
  • ರಾಜ್ಯ ನಾಯಕತ್ವವನ್ನು ಮೂಲೆಗುಂಪು ಮಾಡಿದ್ದು.
  • ಪೂರ್ತಿ ಜವಾಬ್ದಾರಿಯನ್ನು ಮೋದಿ ಹಾಗೂ ಅಮಿತ್ ಷಾ ಹೊತ್ತಿದ್ದು.
  • ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಹಿಂದುಳಿದಿದ್ದು.
  • ಮೀಸಲಾತಿ ಪರಿಣಾಮ ಗುರುತಿಸದೇ ಹೋದದ್ದು.
  • ಮಂತ್ರಿಗಳು ಸಾರ್ವಜನಿಕವಾಗಿ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳದೇ ಇದ್ದದ್ದು.

ಹಾಸ್ತಾಧಿಕಾರದಲ್ಲಿ ಯಾರಿಗೆ ಯಾವ ಸ್ಥಾನ ?

  • ಮುಖ್ಯಮಂತ್ರಿ – ಸಿದ್ದರಾಮಯ್ಯ
  • ಉಪಮುಖ್ಯಮಂತ್ರಿ – ಡಿ. ಕೆ. ಶಿವಕುಮಾರ್
  • ಸ್ಪೀಕರ್ – ಟಿ. ಬಿ. ಜಯಚಂದ್ರ /ಎನ್. ವೈ. ಗೋಪಾಲಕೃಷ್ಣ
  • ಪ್ರತಿಪಕ್ಷದ ನಾಯಕ – ಬಸವರಾಜ ಬೊಮ್ಮಾಯಿ

ಸಚಿವರುಗಳ ಪಟ್ಟಿ

ಬಿ. ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ , ಆರ್. ವಿ. ದೇಶಪಾಂಡೆ , ಯು. ಟಿ. ಖಾದರ್, ಎಂ. ಬಿ. ಪಾಟೀಲ್ ರಾಮಲಿಂಗಾರೆಡ್ಡಿ , ಕೃಷ್ಣ ಬೈರೇಗೌಡ , ಕೆ.ಜೆ. ಜಾರ್ಜ್ ಎಚ್ . ಸಿ. ಮಹದೇವಪ್ಪ , ಲಕ್ಷ್ಮಣ ಸವದಿ , ಶಿವಲಿಂಗೇ ಗೌಡ, ಚೆಲುವರಾಯಸ್ವಾಮಿ , ಡಾ|ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ , ಎಚ್. ಕೆ. ಪಾಟೀಲ್ , ಲಕ್ಷ್ಮಿ ಹೆಬ್ಬಾಳ್ಕರ್ , ಎಚ್.ವೈ. ಮೇಟಿ , ಅಬ್ಬಯ್ಯ ಪ್ರಸಾದ್ , ನಾಗೇಂದ್ರ , ಎಸ್.ಎಸ್.ಮಲ್ಲಿಕಾರ್ಜುನ್, ಕೊತ್ತೂರು ಮಂಜುನಾಥ್ , ನರೇಂದ್ರ ಸ್ವಾಮಿ.

ಮುಂದಿನ ಚಟುವಟಿಕೆಗಳು ?

  • ಭಾನುವಾರ ಸಂಜೆ ಶಾಸಕಾಂಗ ಪಕ್ಷದ ಸಭೆ.
  • ನಾಯಕನ ಆಯ್ಕೆಯ ನಂತರ ರಾಜ್ಯಪಾಲರ ಭೇಟಿ.
  • ಪ್ರಮಾಣವಚನಕ್ಕೆ ದಿನಾಂಕ ನಿಗದಿ.
  • ಪ್ರಮಾಣವಚನ ಸ್ವೀಕಾರ.
  • ಮೊದಲ ಸಂಪುಟದಲ್ಲಿ ಗ್ಯಾರಂಟಿಗಳ ನಿರ್ಧಾರ.
  • ನಂತರ ಅಧಿವೇಶನಕ್ಕೆ ದಿನಾಂಕ ನಿಗದಿ.
  • ಅಧಿವೇಶನದಲ್ಲಿ ಪ್ರಮಾಣವಚನ, ಸ್ಪೀಕರ್ ಆಯ್ಕೆ.
  • ಕೆಲ ದಿನಗಳ ಬಳಿಕ ಮತ್ತೆ ಅಧಿವೇಶನ, ರಾಜ್ಯಪಾಲರ ಭಾಷಣ, ಹೊಸ ಬಜೆಟ್ ಮಂಡನೆ.

ನರೇಂದ್ರ ಮೋದಿ – ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಗೆ ಅಭಿನಂದನೆಗಳು, ಜನತೆ ಅಶೋತ್ತರವನ್ನು ಈಡೇರಿಸುವಲ್ಲಿ ಅವರಿಗೆ ಶುಭವಾಗಲಿ. ನಮ್ಮನ್ನು ಬೆಂಬಲಿಸಿದವರಿಗೂ ಕೃತಜ್ಞತೆ ಸಲ್ಲಿಸುವೆ. ಬಿಜೆಪಿ ಕಾರ್ಯಕರ್ತರ ಪರಿಶ್ರಮ ಶ್ಲಾಘನೀಯ, ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇವೆ.

ರಾಹುಲ್ ಗಾಂಧಿ – ಕರ್ನಾಟಕದ ಜನರು ದ್ವೇಷದ ಮಾರುಕಟ್ಟೆಯನ್ನು ಮುಚ್ಚಿ, ಪ್ರೀತಿ ಪ್ರೇಮದ ಅಂಗಡಿ ತೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ರಾಜ್ಯದ ಜನತೆಗೆ ನನ್ನ ಧನ್ಯವಾದಗಳು, ನಾವು ದ್ವೇಷ ಅಥವಾ ಕೆಟ್ಟ ಭಾಷೆ ಬಳಸದೆ ಚುನಾವಣೆ ಎದುರಿಸಿದೆವು, ರಾಜ್ಯದಲ್ಲಿ ಒಂದು ಕಡೆ ಬಂಡವಾಳಶಾಹಿಗಳ ಬಲವಿದ್ದರೆ, ಮತ್ತೊಂದು ಕಡೆ ಬಡ ಜನರ ಶಕ್ತಿಯಿತ್ತು, ಬಡವರ ಶಕ್ತಿಯೇ ಬಂಡವಾಳಶಾಹಿಗಳ ಪ್ರಭಾವವನ್ನು ನೆಲಕಚ್ಚುವಂತೆ ಮಾಡಿದೆ.