ಹೊನ್ನಳ್ಳಿ : ವಿಧಾನಸಭಾ ಚುನಾವಣೆ ಸೋತ ಬೆನ್ನಲ್ಲೇ ಎಂ. ಪಿ. ರೇಣುಕಾಚಾರ್ಯ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.ಆದರೆ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಎಂ. ಪಿ. ರೇಣುಕಾಚಾರ್ಯ ಅವರ ಮನೆಯ ಮುಂದೆ ಜಮಾಯಿಸಿದ್ದರು.
ಕೋರೋನ ವೈರಸ್ ಬಂದಂತಹ ಕಾಲದಲ್ಲಿ ಕ್ಷೇತ್ರದ ಜನರಿಗೋಸ್ಕರ ತನ್ನ ಸಂಸಾರದ ಸಮೇತ ಬೀದಿಗಿಳಿದು ಜನರ ಕಷ್ಟವನ್ನು ನಿವಾರಣೆ ಮಾಡಿ ಕೋರೋನ ಕಾಯಿಲೆಗೆ ತುತ್ತಾದವರನ್ನು ತನ್ನ ಸ್ವಂತ ಮನೆಯವರಿಗಿಂತ ಹೆಚ್ಚಾಗಿ ಪೋಷಣೆ ಮಾಡಿದ್ದರು, ಹಾಗೂ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು, ಆದರೆ ಅವರು ಮಾಡಿದ ಸಹಾಯವನ್ನು ಕ್ಷೇತ್ರದ ಜನರು ಕೇವಲ ಹಣಕ್ಕಾಗಿ, ಬಿಟ್ಟಿ ಭಾಗ್ಯಗಳಿಗಾಗಿ ಮರುಳಾಗಿದ್ದನ್ನು ನೋಡಿ ಬಹಳ ಬೇಸರದಿಂದ, ನಾನು ಯಾರೊಬ್ಬರಿಗೂ ಕೂಡ ಭೇದ ಭಾವ ಮಾಡದೇ ನಾನು ನನ್ನ ಹೆಂಡತಿ ಮಕ್ಕಳು ಕ್ಷೇತ್ರಕ್ಕಾಗಿ ದುಡಿದಿದ್ದು ವ್ಯರ್ಥವಾಯಿತು ಎಂದು ಬಹಳ ನೋವಿನಿಂದ ಅಳುತ್ತಾ ಹೇಳಿದರು.
ರಾಜಕೀಯ ನಿವೃತ್ತಿಯ ಬಗ್ಗೆ ಒಂದು ವಾರದ ನಂತರ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿ ಕಳುಹಿಸಿದರು.