ತುಮಕೂರು : ಸುದ್ದಿ ಮಾಧ್ಯಮಗಳಲ್ಲಿ ತನ್ನ ಮಾತಿನ ಶೈಲಿಯಿಂದ ನಿಖರವಾದ ಮಾತುಗಳು ಹಾಗೂ ವಕ್ತಾರರಿಗೆ ಮಧ್ಯಮಗಳಲ್ಲಿ ಪ್ರತ್ಯುತ್ತರ ನೀಡುವುದರ ಮೂಲಕ H. N. ಚಂದ್ರಶೇಖರ್ (ಬಿಜೆಪಿ ವಕ್ತಾರಾರು) ಅವರು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾರೆ.
ಮಧ್ಯಮವೊಂದರಲ್ಲಿ ಮಾತನಾಡಿದ ಚಂದ್ರಶೇಖರ್ ಅವರು, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿರಬಹುದು ಆದರೆ ನಮ್ಮ ಪಕ್ಷದ ಮೇಲೆ ನಮಗೆ ತುಂಬಾ ಹೆಮ್ಮೆ ಇದೆ ಏಕೆಂದರೆ ನಮಗೆಲ್ಲ ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಮಂತ್ರವನ್ನು ಹೇಳಿಕೊಟ್ಟಿದ್ದಾರೆ, (ನಾ ಧೈರ್ಯಂ ನಾ ಫಲಾಯನಂ)ನಾವು ಯಾವತ್ತೂ ಹೋಡಿಹೋಗುವುದೂ ಇಲ್ಲ, ಸೋತೆ ಅಂತ ಸುಮ್ಮನೇ ಕೊರುವುದೂ ಇಲ್ಲ, ಮತ್ತೆ ಜನರ ಮುಂದೆ ಹೋಗುತ್ತೇವೆ ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಸಂಘಟನೆಯನ್ನು ಬಲಪಡಿಸುತ್ತೇವೆ ಮುಂದಿನ ಚುನಾವಣೆಯಲ್ಲಿ ಖಂಡಿತ ನಾವು ಗೆದ್ದು ಬರುತ್ತೇವೆ.
ನಮ್ಮ ಪಕ್ಷ ಅಧಿಕಾರದ ಆಸೆಗೆ ಅಂಟಿಕೊಳ್ಳದೆ ನಮ್ಮ ಪಕ್ಷದ ತತ್ವ, ಸಿದ್ದಂತಾ, ತನ್ನ ನಿಲುವಿನಿಂದ ನಮ್ಮ ಪಕ್ಷ ಗಟ್ಟಿಯಾಗಿದೆ, ಈ ಭಾರಿ 75 ಜನ ಹೊಸಬರಿಗೆ ಟಿಕೆಟ್ ಅನ್ನು ಕೊಟ್ಟಿದೆ ಸಾಕಷ್ಟು MLA ಗಳನ್ನು ಬದಲಾಯಿಸಿ ಟಿಕೆಟ್ ಕೊಟ್ಟಿದೆ, ಏಕೆಂದರೆ ಹೊಸ ನೀರಿಗೆ ಅವಕಾಶ ಕೊಡಲೇಬೇಕಿತ್ತು, ನಿಂತ ನೀರು ಅರಿಯುವುದಕ್ಕೆ ಬಿಡಲೇ ಬೇಕಿತ್ತು , ಸಾಮಾಜಿಕ ನ್ಯಾಯವನ್ನು ಕೊಡಲೇಬೇಕಿತ್ತು ಹಾಗಾಗಿ ತಿಳಿದಿದ್ದರೂ ಸಹ ಪಕ್ಷ ಈ ಬಾರಿ ರಿಸ್ಕ್ ಅನ್ನು ತೆಗೆದುಕೊಂಡಿದೆ, ನಾವು ಚುನಾವಣೆಯಲ್ಲಿ ಸೋತಿರಬಹುದು ಆದರೆ ನಮ್ಮ ನಿಲುವು, ಬದ್ಧತೆಯೊಳಗೆ ಪಕ್ಷ ಗೆದ್ದಿದೆ ಎಂದು ಹೇಳಿದರು.