ಸ್ಮಾರ್ಟ್ ಸಿಟಿಯಲ್ಲಿ ಗಬ್ಬು ನಾರುತ್ತಿರುವ ಕಸ ! ಪ್ರತಿಷ್ಠಿತ ಬಡಾವಣೆಯಲ್ಲಿ ಅವ್ಯವಸ್ಥೆಯ ತಾಣ

ತುಮಕೂರು : ತುಮಕೂರು ನಗರದ ಪ್ರತಿಷ್ಠಿತ ಬಡಾವಣೆ 14ನೇ ವಾರ್ಡಿನ ವಿನಾಯಕ ನಗರದ ಗಣಪತಿ ಪೆಂಡಲ್ ಹಿಂಭಾಗ ಹಾಗೂ ರೇಷ್ಮೆ ಇಲಾಖೆಯ ಹಿಂಭಾಗದ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಹಲವು ರೀತಿಯ ತ್ಯಾಜ್ಯವನ್ನು ತಂದು ಹಾಕಿ ಈ ಭಾಗದಲ್ಲಿ ದುರ್ವಾಸನೆ ಬೀರುತ್ತಿದ್ದು ಜನರು ಓಡಾಡಲು ತುಂಬಾ ತೊಂದರೆ ಉಂಟಾಗುತ್ತಿದೆ‌.ಇದು ಸ್ಮಾರ್ಟ್ ಸಿಟಿಯೋ ಇಲ್ಲಾ ಗಬ್ಬು ನಾರುತ್ತಿರುವ ಸಿಟಿಯೋ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.ಹಲವರು ಬಾರಿ ಸಂಬಂದಿಸಿದ ಅಧಿಕಾರಿಗಳಿಗೂ ತಿಳಿಸಿದ್ದರು ಇಂತ ಕಡೆಯೂ ಸುಳಿಯುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾರು ತಲೆಕೆಡಿಸಿಕೊಳ್ಳದೆ ಇರುವುದು ನಾಚಿಕೆಗೇಡಿನ ಸಂಗತಿ ಎನ್ನಬಹುದು. ಗಬ್ಬು ನಾರುತ್ತಿರುವ ಹಾಗೂ ಕೋಳಿ ಅಂಗಡಿಯ ಕಸವನ್ನೆಲ್ಲಾ ಇಲ್ಲಿಗೆ ತಂದು ಹಾಕುತ್ತಿದ್ದು ಇಲ್ಲಿನ ಅವ್ಯವಸ್ಥೆಗೆ ಕಾರಣವಾಗಿದೆ.ಇದರಿಂದ ಈ ಭಾಗದಲ್ಲಿ ವಾಸವಾಗಿರುವ ಹಾಗೂ ಅಂಗಡಿ ವರ್ತಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಹಾಗೂ ಸೊಳ್ಳೆ, ನೊಣಗಳ ಕಾಟದಿಂದ ಈ ಭಾಗ ಜನರಲ್ಲಿ ಹಲವರು ಖಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಕೂಡಲೇ ಪಾಲಿಕೆ ಆಯುಕ್ತರು ಎಚ್ಚೆತ್ತು ಈ ಜಾಗದಲ್ಲಿ ತ್ಯಾಜ್ಯ ಹಾಕದಂತೆ ಹಾಗೂ ಮೂರ್ತ ವಿಸರ್ಜನೆ ಮಾಡದಂತೆ ತಡೆಯುವ ಮೂಲಕ ಸ್ಮಾರ್ಟ್ ಸಿಟಿ ಎಂದು ನಿರೂಪಿಸಬೇಕು.ಇಲ್ಲವಾದರೆ ಈ ಭಾಗದಲ್ಲಿ ಆಗುವ ತೊಂದರೆಗಳಿಗೆ ತುಮಕೂರು ಮಹಾನಗರ ಪಾಲಿಕೆಯ ಕಾರಣವಾಗಲಿದೆ‌.

ಈ ತ್ಯಾಜ್ಯದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಇದಕ್ಕೆ ಪಾಲಿಕೆ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.