ಗುಬ್ಬಿ : ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಸ್. ಡಿ. ದಿಲೀಪ್ ಕುಮಾರ್ ಅವರಿಗೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಹೆಗಲಿಗೆ ಹೆಗಲು ಕೊಟ್ಟು, ಹಗಲಿರುಳು ಶ್ರಮಿಸಿದ ಅತ್ಮೀಯ ಕಾರ್ಯಕರ್ತರಿಗೆ, ಹಿತೈಷಿ ಬಂಧುಗಳಿಗೆ ಹಾಗೂ ಮುಖಂಡರುಗಳಿಗೆ, ಮತದಾರ ಬಂದುಗಳಿಗೆ ಅಭಿನಂದನಾ ಸಮಾರಂಭವನ್ನು 22/05/2023 ರ ಸೋಮವಾರ ದಂದು ಬಿ. ಎಚ್. ರಸ್ತೆಯಲ್ಲಿರುವ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು ತಪ್ಪದೇ ಭಾಗವಹಿಸಬೇಕೆಂದು ಶ್ರೀ. ಎಸ್. ಡಿ. ದಿಲೀಪ್ ಕುಮಾರ್ ಅವರು ವಿನಂತಿ ಮಾಡಿದ್ದಾರೆ.
ಚುನಾವಣೆ ಎಂದರೆ ಸೋಲು ಗೆಲುವು ಸಹಜ ಆದರೆ ಅದನ್ನು ಸಮನಾಗಿ ಸ್ವೀಕರಿಸಿ ತನ್ನ ಏಳಿಗೆಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಎಲ್ಲರಿಗೂ ಗೌರವವನ್ನು ಸೂಚಿಸುತ್ತಿರುವ ದಿಲೀಪ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚುನಾವಣೆಯ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಂಡು ಜನರ ಬಳಿ ಮತ ಕೇಳುವುದಕ್ಕೆ ಬರುತ್ತಾರೆ ಆದರೆ ದಿಲೀಪ್ ಕುಮಾರ್ ಅವರಿಗೆ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆಯಾಗಿದ್ದರೂ ಸಹ ಸದಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ ಜನತೆಯ ಕಷ್ಟಗಳಲ್ಲಿ ಸಂತೋಷದಲ್ಲಿ ಭಾಗಿಯಾಗಿ ಹಗಲಿರುಳು ಕ್ಷೇತ್ರದ ಜನತೆಗೋಸ್ಕರ ಶ್ರಮಿಸುತ್ತಿರುವುದು ಕ್ಷೇತ್ರದ ಜನತೆಗೆ ಅವರ ಮೇಲೆ ಇನ್ನಷ್ಟು ಗೌರವವನ್ನು ಹೆಚ್ಚು ಮಾಡಿದೆ.