ಗುಬ್ಬಿ ಶಾಸಕರ ಕಣ್ಣಿಗೆ ಕಾಣದ ನಿಟ್ಟೂರು – ಚೇಳೂರು ರಸ್ತೆ

ಗುಬ್ಬಿ : ಹಲವಾರು ವರ್ಷಗಳಿಂದ ಕಾಮಗಾರಿಯನ್ನು ಕಾಣದೆ ಉಳಿದಿರುವ ನಿಟ್ಟೂರು – ಚೇಳೂರು ರಸ್ತೆಯಲ್ಲಿ ಬರೀ ಗುಂಡಿಗಳೇ ಇದ್ದು ದಿನನಿತ್ಯ ವಾಹನ ಸಂಚಾರರಿಗೆ ರಸ್ತೆಯಲ್ಲಿ ಓಡಾಡಲು ಬಹಳ ತೊಂದರೆ ಇದ್ದರೂ ಸಹ ಶಾಸಕ ಎಸ್. ಆರ್. ಶ್ರೀನಿವಾಸ್ ಹಾಗೂ ಲೋಕಸಭಾ ಸದಸ್ಯ ಬಸವರಾಜು ಅವರುಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಅಲ್ಲಿನ ಜನ ಹಾಗೂ ವಾಹನ ಸವಾರರು MLA ಶ್ರೀನಿವಾಸ್ ಹಾಗೂ MP ಬಸವರಾಜ್ ಅವರಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಈಗಾಗಲೇ 20 ವರ್ಷಗಳಿಂದ ಶಾಸಕರಾಗಿ ಮತ್ತು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಸ್. ಆರ್. ಶ್ರೀನಿವಾಸ್ ಅವರು ಗುಬ್ಬಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಜನಪರ ಕೆಲಸಗಳನ್ನಾಗಲಿ ಅಭಿವೃದ್ಧಿಯನ್ನಾಗಲಿ ಮಾಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಯಾವುದೇ ರೀತಿಯ ಅಭಿವೃದ್ಧಿಯನ್ನು ಶಾಸಕರು ಮಾಡಿಲ್ಲ ನಿಟ್ಟೂರಿನಿಂದ ಚೇಳೂರಿಗೆ ಹೋಗುವ ರಸ್ತೆ ಹಲವಾರು ವರ್ಷಗಳಿಂದ ಗುಂಡಿ ಬಿದ್ದು ಓಡಾಡಲು ಬಹಳ ತೊಂದರೆಯಾಗುತ್ತಿದೆ ಎಂದು ಎಷ್ಟು ಬಾರಿ ಮನವಿ ಮಾಡಿದರು ಸಹ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ, ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ಮತವನ್ನು ಕೇಳಲು ಬರುತ್ತಾರೆ, ಜನರಿಗೆ ಹಣದ ಆಮಿಷವನ್ನು ಹೊಡ್ದಿ ಅವರನ್ನು ಮೂರ್ಖರನ್ನಾಗಿ ಮಾಡಿ ಮತವನ್ನು ಪಡೆಯುತ್ತಾರೆ ಎನ್ನುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದಾರೆ ಈಗಲಾದರೂ ಸಹ ಕೆಲಸಗಳನ್ನು ಮಾಡಲಿ ಎನ್ನುವುದು ಅಲ್ಲಿನ ಜನರ ಅಭಿಪ್ರಾಯವಾಗಿದೆ.