ಹೊಸ ವೈರಸ್ ನಿಂದ ಮೊಬೈಲ್ ಫೋನ್ ಹ್ಯಾಕ್ ! ಫೋನ್ ವೈರಸ್ ಬಗ್ಗೆ ಜಾಗ್ರತೆ ಇರಲಿ

ಆ್ಯಂಡ್ರಾಯ್ಡ್ ಚಾಲಿತ ಸ್ಮಾಟ್ ಫೋನ್‌ಗಳಿಗೆ ‘ಡ್ಯಾಮ್’ ಹೆಸರಿನ ವೈರಸ್ ನುಸುಳುವ ಸಾಧ್ಯತೆ ಇದ್ದು , ಇದರಿಂದ ಕಾಲ್ ಲಾಗ್, ಕ್ಯಾಮರಾ ಹ್ಯಾಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ಬಳಕೆದಾರರು ಎಚ್ಚರಿಕೆ ವಹಿಸಬೇಕು ಎಂದು ರಾಷ್ಟ್ರೀಯ ಸೈಬರ್ ಸುರಕ್ಷತಾ ಸಂಸ್ಥೆ ಸಲಹೆ ನೀಡಿದೆ.

ಈ ವೈರಸ್, ಆ್ಯಂಟಿ ವೈರಸ್ ಶೋಧಕವನ್ನು ವಂಚಿಸಿ ಡ್ಯಾನ್ ಸಮ್‌ವೇರ್ ಅನ್ನು ಫೋನ್‌ನಲ್ಲಿ ಅಡಕ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್‌ಟಿ-ಇನ್) ಹೇಳಿದೆ. ಥರ್ಡ್ ಪಾರ್ಟಿ ವೆಬ್‌ಸೈಟ್ ಅಥವಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವುದರಿಂದ ಈ ವೈರಸ್ ಫೋನ್‌ಗೆ ಬರುವ ಸಾಧ್ಯತೆ ಇದ್ದು, ಸೂಕ್ಷ್ಮ ಮಾಹಿತಿಗಳನ್ನು ಕಳವು ಮಾಡುತ್ತದೆ. ಬಳಕೆದಾರರ ಹಿಸ್ಟರಿ , ಬುಕ್‌ಮಾರ್ಕ್‌ಗಳನ್ನು ಶೋಧಿಸುವ ಇದು, ಬ್ಯಾಕ್‌ಗ್ಲೆಂಡ್ ಪ್ರೊಸಸಿಂಗ್ ಅನ್ನು ಹಾಳು ಮಾಡುತ್ತದೆ. ಫೋನ್ ಕಾಲ್ ರೆರ್ಕಾಡಿಂಗ್, ಕಾಂಟ್ಯಾಕ್ಟ್ಸ್ ಗಳನ್ನು ಹ್ಯಾಕ್ ಮಾಡುತ್ತದೆ ಎಂದು ಸಿಇಆರ್‌ಟಿ-ಇನ್‌ ತಿಳಿಸಿದೆ.