ನೂತನ ಸಂಸತ್ ಭವನದಲ್ಲಿ ಕನ್ನಡದ ಕಂಪು

ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಸಂಸತ್ ಭವನವು ಬಹಳ ವೈಭವವಾಗಿದ್ದು ಹಲವಾರು ವಿಶೇಷತೆಗಳನ್ನೊಳಗೊಂಡಿದೆ, ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆಯು ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಭಾರತೀಯ ಪರಂಪರೆ ಸನಾತನ ಸಂಸ್ಕೃತಿಯನ್ನು ಒಳಗೊಂಡಿದೆ ಮತ್ತು ಬಸವಣ್ಣ ನವರ ವಚನ, ಹಂಪಿಯ ಕಲ್ಲಿನ ರಥವನ್ನು ಸಂಸತ್ ಭವನದ ಗೋಡೆಯಮೇಲೆ ಕೆತ್ತಲಾಗಿದ್ದು ಇದರಿಂದ ಕನ್ನಡಿಗರು ಹೆಮ್ಮೆಪಡುವಂತಾಗಿದೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ,ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ದಿ ಇದೇ ಬಹಿರಂಗಶುದ್ದಿ ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ

ಎಂದು ಬಸವಣ್ಣನವರ ವಚನವನ್ನು ನೂತನ ಸಂಸತ್ ಭವನದಲ್ಲಿ ಕೆತ್ತಲಾಗಿ.

ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ ಶತಶತಮಾನಗಳಿಂದ ಈ ನಾಡಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಪ್ರಜ್ವಲಿಸುತ್ತಿತ್ತು ಎನ್ನುವುದಕ್ಕೆ 12 ನೇ ಶತಮಾನದ ಬಸವಣ್ಣನವರ ಅನುಭವ ಮಂಟಪವೇ ಸಾಕ್ಷಿ. ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ನಮ್ಮ ನಾಡಿನ ಮಹಾನ್ ಸಾಧಕರಿಗೆ, ಅವರ ಶ್ರೇಷ್ಠ ಭೋದನೆಗಳಿಗೆ ಶಾಶ್ವತ ಸ್ಥಾನ ಕಲ್ಪಿಸಿ ಗೌರವ ಸಲ್ಲಿಸಿರುವಿದು ಜನತೆಯ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಬರೆದ ಟಿಪ್ಪಣಿಯಲ್ಲಿ “ಭಾರತದ ಪ್ರಜಾಸಾತ್ತಾತ್ಮಕ ಇತಿಹಾಸದಲ್ಲಿ ಒಂದು ಮಹತ್ತರವಾದ ಕ್ಷಣಕ್ಕೆ ನಾನು ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ನಾನು 1962 ರಲ್ಲಿ ವಿಧಾನಸಭೆಗೆ ಪ್ರವೇಶಿಸಿ 1991 ರಿಂದ ಸಂಸತ್ ಸದಸ್ಯನ್ನಾಗಿದ್ದೆ. 32ವರ್ಷಗಳ ಹಿಂದೆ ನಾನು ಈ ಮಹಾನ್ ಸದನವನ್ನು ಪ್ರವೇಶಿಸಿದಾಗ , ನಾನು ಪ್ರಧಾನಿಯಾಗುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ ಮತ್ತು ನಾನು ಇಷ್ಟು ದಿನ ಉಳಿಯುತ್ತೇನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ಇನ್ನ ದೊಡ್ಡ ಆಶ್ಚರ್ಯವೇನೆಂದರೆ ನನ್ನ ಜೀವಿತಾವಧಿಯಲ್ಲಿ ನಾನು ಹೊಸ ಸಂಸತ್ತಿನ ಕಟ್ಟಡದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ – ನಾನು 91 ನೇ ವಯಸ್ಸಿನಲ್ಲಿ ಹಾಗೆ ಮಾಡಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.