ಕೊರಟಗೆರೆ: ಪೆಟ್ರೋಲ್ ಮತ್ತು ಡಿಸೇಲ್‌ಗೆ ನಮ್ಮ ಜನ ತೆರಿಗೆ ಕಟ್ಟೋದಿಲ್ವಾ. ಸರ್ವಿಸ್ ರಸ್ತೆಯೇ ಇಲ್ಲದೇ ಕೊರಟಗೆರೆ ಕ್ಷೇತ್ರದ ಎರಡು ಕಡೆ ಅವೈಜ್ಞಾನಿಕ ಟೋಲ್ ನಿರ್ಮಾಣ ಆಗಿವೆ.. ಜನರಿಂದ ಹಣ ವಸೂಲಿ ಮಾಡದಂತೆ ಈಗಾಗಲೇ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಮಧುಗಿರಿ ಕ್ಷೇತ್ರದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಖಡಕ್ ಎಚ್ಚರಿಕೆ ನೀಡಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಸುಪ್ರಸಿದ್ದ ಸಸ್ಯಕಾಶಿಯಾದ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಶ್ರೀಮಠಕ್ಕೆ ಭಾನುವಾರ ಸಂಜೆ ಬೇಟಿನೀಡಿ ಮಾತನಾಡಿದರು. ಪಿಟ್ಯೂಡಿ ಸಚಿವರ ಜೊತೆ ನಾನೇ ಖುದ್ದಾಗಿ ಮಾತನಾಡಿ ಟೋಲ್ ತೆರವು ಮಾಡಿಸ್ತೀನಿ. ಪ್ರವಾಸೋಧ್ಯಮ ನಂಬಿಯೇ ಹತ್ತಾರು ದೇಶಗಳು ಅಭಿವೃದ್ಧಿಯ ಪಥದತ್ತಾ ಸಾಗುತ್ತಿವೆ. ಉದ್ಯೋಗ ಸೃಷ್ಟಿಗೆ ಪ್ರವಾಸಿ ಕ್ಷೇತ್ರವು ಹೆಚ್ಚಿನ ಸಹಕಾರಿ ಆಗಲಿದೆ. ಪ್ರವಾಸಿಕ್ಷೇತ್ರ ಅಭಿವೃದ್ಧಿಯಿಂದ ಯುವಕರ ಜೀವನಮಟ್ಟ ಸುಧಾರಣೆ ಕಾಣಲಿದೆ. ತುಮಕೂರು ಜಿಲ್ಲೆಯ ಪ್ರವಾಸಿಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದು ತಿಳಿಸಿದರು.
ಸಿದ್ದರಬೆಟ್ಟ ಶ್ರೀಮಠ ಎಂದರೇ ನನಗೇ ತುಂಬಾನೇ ಪ್ರೀತಿವಿಶ್ವಾಸ, ಮಧುಗಿರಿ ಕ್ಷೇತ್ರದ ಜನರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಮಾತಿನಂತೆ ನನಗೆ ಸಚಿವಸ್ಥಾನ ಸಿಕ್ಕಿದೆ. 5ವರ್ಷ ಮಧುಗಿರಿ ಕ್ಷೇತ್ರದ ಅಭಿವೃದ್ಧಿ ಮತ್ತು ಬಡಜನರ ರಕ್ಷಣೆಗೆ ನಾನು ಸದಾ ಜೊತೆ ಆಗಿರುತ್ತೇನೆ. ನನ್ನನ್ನು ನಂಬಿದ ಜನರ ಜೊತೆಯಲ್ಲಿದ್ದು ಮಧುಗಿರಿ ಜಿಲ್ಲೆಯ ರಚನೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಬೇಟಿಯ ವೇಳೆ ತುಮಕೂರು ವಿಧಾನ ಪರಿಷತ್ – ಸದಸ್ಯ ಆರ್.ರಾಜೇಂದ್ರ, ಮಾಜಿ ಜಿಪಂ ಸದಸ್ಯೆ ಶಾಂತಲಾರಾಜಣ್ಣ, ಮುಖಂಡರಾದ ರಾಜರವೀಂದ್ರ ನಾಯಕ, ಹನುಮಂತರಾಯಪ್ಪ, ರವೀಶ್, ಗೋವಿಂದರಾಜು, ರಮೇಶ್, ರಾಮಚಂದ್ರಯ್ಯ, ಕೃಷ್ಣಪ್ಪ, ರುದ್ರಮುನಿ, ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.