ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ ಡಾ.ಟಿ. ಎನ್. ಪುರುಷೋತ್ತಮ್ ! DMO ತುಮಕೂರು

ತುಮಕೂರು : ಆರೋಗ್ಯ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಡಾ. ಟಿ. ಎನ್. ಪುರುಷೋತ್ತಮ್ ಅವರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಿವೃತ್ತಿ ಜೀವನಕ್ಕೆ ಶುಭಕೋರಿ ಬೀಳ್ಕೊಡಲಾಯಿತು.

ಡಾ. ಟಿ. ಎನ್. ಪುರುಷೋತ್ತಮ್ ಅವರು 21 ಮೇ 1963 ರಲ್ಲಿ ಜನಿಸಿ , ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ 18 ಜುಲೈ 1991 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಸಾಮಾನ್ಯ ವೈದ್ಯಾಧಿಕಾರಿಯಾಗಿ ಪ್ರಾಥಮಿಕ ಆರೋಗ್ಯ ಘಟಕ ನುಗ್ಗೇಹಳ್ಳಿ ಚನ್ನರಾಯಪಟ್ಟಣ ತಾಲ್ಲೋಕು ಹಾಸನ ಜಿಲ್ಲೆ ಇಲ್ಲಿಗೆ ಮೊದಲ ಬಾರಿಗೆ ನೇಮಕಗೊಳ್ಳುತ್ತಾರೆ , ಕರ್ತವ್ಯ ನಿರ್ವಹಣೆ ಕೇಂದ್ರದಲ್ಲಿದ್ದುಕೊಂಡು ಅತಿ ಹೆಚ್ಚು ಹೊರರೋಗಿಗಳಿಗೆ ನಿರ್ವಹಣೆ ಹಾಗೂ ಚಿಕಿತ್ಸೆ ಮತ್ತು ಎಲ್ಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಾರೆ, ಪ್ರಾಥಮಿಕ ಆರೋಗ್ಯ ಘಟಕವೊಂದರಲ್ಲಿ ನೆಡೆದ ನೇತ್ರ ಶಸ್ತ್ರ ಚಿಕಿತ್ಸಾ (ಕಣ್ಣಿನ ಪೊರೆ )ಶಿಬಿರವೊಂದರಲ್ಲಿ ದಾಖಲೆಯ 78 ಜನರ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಡಿಸೆಂಬರ್ 1 , 1994 ರಲ್ಲಿ ಖಾಯಂ ಪೂರ್ವಸೇವಾವಧಿ ಘೋಷಣೆಯನ್ನು ಮಾಡಲಾಗುತ್ತದೆ.

ಆರೂಡಿ ಪ್ರಾಥಮಿಕ ಆರೋಗ್ಯ ಘಟಕ ದೊಡ್ಡಬಳ್ಳಾಪುರ ತಾಲ್ಲೋಕು ಬೆಂಗಳೂರು ಜಿಲ್ಲೆ ಇಲ್ಲಿಗೆ 20 ಜೂನ್ 1995ರಿಂದ ಸೆಪ್ಟೆಂಬರ್ 23 , 2004 ರ ವರೆಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಪ್ರದೇಶದಲ್ಲಿ 9 ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತಾರೆ, ಆರೋಗ್ಯ ಘಟಕದಲ್ಲಿ ತೀರಾ ಸಣ್ಣದಾದ ಹಳೆಯ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ನಂತರ ಸ್ಥಳೀಯ ಚುನಾಯಿತ ಅಭ್ಯರ್ಥಿಗಳ ಹತ್ತಿರ ಮತ್ತು ಇಲಾಖೆಯೊಂದಿಗೆ ವ್ಯವಹರಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿಸಿ ಉದ್ಘಾಟನೆಯನ್ನು ಮಾಡುತ್ತಾರೆ.

ನಂತರ 23 ಸೆಪ್ಟೆಂಬರ್ 2004 ರಿಂದ 30 ಜೂನ್ 2012 ರ ವರೆಗೆ ವೈದ್ಯಾಧಿಕಾರಿಯಾಗಿ ದೊಡ್ಡಬಳ್ಳಾಪುರ ತಾಲ್ಲೋಕಿನ ಹುಲಿಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಾರೆ.

01 ಜುಲೈ 2012 ರಿಂದ 27 ಮೇ 2013 ರ ವರೆಗೆ ಉಪಮುಖ್ಯ ವೈದ್ಯಾಧಿಕಾರಿಯಾಗಿ ಜಿಲ್ಲಾ ಆಸ್ಪತ್ರೆ ತುಮಕೂರಿನಲ್ಲಿ ಕರ್ತವ್ಯವನ್ನು ಸಲ್ಲಿಸುತ್ತಾರೆ.

27 ಮೇ 2013 ರಿಂದ 14 ಆಗಸ್ಟ್ 2018 ರ ವರೆಗೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಯಾಗಿ ಕರ್ತವ್ಯವನ್ನು ಮಾಡುತ್ತಾ ಅತೀ ದೊಡ್ಡ ಜಿಲ್ಲೆ (10 ತಾಲ್ಲೂಕುಗಳು, ಅತಿ ಹೆಚ್ಚಿನ ಆರೋಗ್ಯ ಸಂಸ್ಥೆಗಳು) ಯಾದ ತುಮಕೂರು ಜಿಲ್ಲೆಯಲ್ಲಿ ಸರ್ವೇಕ್ಷಣಾ ಕಾರ್ಯಗಳಿಗೆ ನವಚೈತನ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿದರು ಮತ್ತು ಸರ್ವೇಕ್ಷಣಾ ಚಟುವಟಿಕೆಗಳು, (S, P, ಮತ್ತು L form reporting)ಗಳನ್ನು ಮುಖ್ಯವಾಹಿನಿಗೆ ತರಲು ಕ್ರಿಯಾಶೀಲಗೊಳಿಸಲು ಸತತ ಪ್ರಯತ್ನ ಮಾಡಿ ಯಶಸ್ವಿಯಾದರು (98 ರಿಂದ 99 ಪ್ರತಿಶತ reporting ಸಾಧನೆ). S, P ಹಾಗೂ L ವರದಿಯಲ್ಲಿ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಪ್ರಾಯೋಗಿಕವಾಗಿ ಜಾರಿಮಾಡಲ್ಪಟ್ಟ Integrated Health Information platform (IHIP) ಯೋಜನೆಗೆ ತುಮಕೂರು ಜಿಲ್ಲೆಯನ್ನು ಆಯ್ಕೆಮಾಡಲಾಯಿತು.

29 ಡಿಸೆಂಬರ್ 2018 ರಿಂದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯಕ್ಕೆ ಸೇರ್ಪಡೆ ಡೆಂಗ್ಯೂ , ಚಿಕುನ್‌ಗುನ್ಯಾ , ಮಲೇರಿಯಾ , ಫೈಲೇರಿಯಾ , ಮೆದುಳು ಜ್ವರದಂತಹ ರೋಗಗಳ ನಿಯಂತ್ರಣಕ್ಕಾಗಿ ಅವಿರತ ಮೂಲೆ ಮೂಲೆಯಲ್ಲಿ ವರದಿಯಾಗುವ ಉಲ್ಬಣ ಪ್ರಕರಣಗಳು ಪತ್ತೆ ಮಾಡಿ ಜಿಲ್ಲೆಯಾದ್ಯಂತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಸಫಲತೆ ಹೊಂದಿದರು.

ತಳಮಟ್ಟದಿಂದ ಪ್ರಕರಣಗಳ ಪತ್ತೆ ವರದಿ ಹಾಗೂ ಚಿಕಿತ್ಸಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ರಿಪೋರ್ಟಿಂಗ್ ಸಿಸ್ಟಮ್ ಸದೃಢಗೊಳಿಸುವ ನಿರಂತರ ಪ್ರಯತ್ನವನ್ನು ಮಾಡುತ್ತಿದ್ದರು.

ಅಂತರ ಇಲಾಖಾ ಸಮನ್ವಯಕ್ಕಾಗಿ ವಿಶೇಷವಾಗಿ ಎಲ್ಲಾ ಹಂತಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸುವ ಪ್ರಯತ್ನ.

ಆರೋಗ್ಯ ಶಿಕ್ಷಣವನ್ನು ನೀಡಲು ವೃತ್ತ ಪತ್ರಿಕೆಗಳಲ್ಲಿ ಆರೋಗ್ಯ ಸಂಬಂಧಿ ಲೇಖನಗಳ ಪ್ರಕಟಣೆ.

ನೇರ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಡೆಂಗ್ಯೂ ಮಲೇರಿಯಾ, ತಂಬಾಕು ನಿಯಂತ್ರಣ, NIPAH ಕುರಿತಂತೆ ಸ್ಥಳೀಯ ಸಿದ್ಧಾರ್ಥ ಬಾನುಲಿಯಲ್ಲಿ ಹಲವಾರು ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು. ಸದರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪ್ರಗತಿ ದೂರದರ್ಶನದ ಚಾನಲ್‌ನಲ್ಲಿ ನಿರಂತರವಾಗಿ ಹಲವಾರು ಸಂವಾದ, ಚರ್ಚೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ.

ಕಳೆದೆರಡು ವರ್ಷಗಳಲ್ಲಿ ಕೊರೋನಾ ಸನ್ನಿವೇಶದಲ್ಲಿ ತುರುವೇಕೆರೆ ತಿಪಟೂರು ತಾಲ್ಲೂಕುಗಳಲ್ಲಿ ನೋಡಲ್ ಅಧಿಕಾರಿಯಾಗಿ ಎಲ್ಲಾ ಹಂತಗಳಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ವಿಶೇಷ ಕ್ರಮ ಮತ್ತು ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದಾರೆ.

ಈಗ ಡಾ.ಟಿ. ಎನ್. ಪುರುಷೋತ್ತಮ್ (DMO) ಅವರು ತಮ್ಮ ವೃತ್ತಿ ಜೀವನವನ್ನು ಮುಗಿಸಿ 31 ಮೇ , 2023 ರಂದು ಕರ್ತವ್ಯದಿಂದ ಬಿಡುಗಡೆಗೊಂಡರು. ಆರೋಗ್ಯ ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ ನಿವೃತ್ತಿ ಜೀವನಕ್ಕೆ ಶುಭಕೋರಿ ಬೀಳ್ಕೊಟ್ಟರು .