ಬಜರಂಗದಳ ಕಾರ್ಯಕರ್ತರ ಕುರಿತು ಕಾಂಗ್ರೆಸ್ ಟ್ವೀಟ್ ! ಬಿಜೆಪಿ ತಿರುಗೇಟು

ರಾಜ್ಯದಲ್ಲಿ ಕುತೂಹಲವನ್ನು ಉಂಟುಮಾಡಿದ ಗ್ಯಾರಂಟಿ ಸ್ಕೀಮ್ ಕುರಿತು ಇತ್ತೀಚೆಗೆ ಬಹಳ ಚರ್ಚೆಗೊಳಪಟ್ಟಿತ್ತು, ಕಾಂಗ್ರೆಸ್ ಸರ್ಕಾರದ ಮುಂದೆ ದೊಡ್ಡ ಸಾವಲಗಿದ್ದ ಗ್ಯಾರಂಟಿ ಸ್ಕೀಮ್ ಅನ್ನು ಇದೀಗ ಸಿದ್ದರಾಮಯ್ಯ ಸರ್ಕಾರ ಕಂಡೀಶನ್ ಅಪ್ಲೈ ಮಾಡಿ ಜಾರಿಗೆ ತಂದಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ , ಸಿ. ಟಿ. ರವಿ , ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಅವರುಗಳ ಜೊತೆಯಲ್ಲಿ ಭಜರಂಗದಳದ ಕಾರ್ಯಕರ್ತರನ್ನು ಟೀಕೆ ಮಾಡಿದೆ.

ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ! ಶೋಭಾ ಅವರೇ, ನಿಮಗೂ ಪ್ರಯಾಣ ಫ್ರೀ ! , ಸಿ. ಟಿ. ರವಿ ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ! , ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ. ಎಂದು ಟ್ವೀಟ್ ಮಾಡಿದ್ದಾರೆ.

ಅದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ,

ಖಂಡಿತ ಸ್ವಾಮಿ ಹಾಗೆ ನಿರುದ್ಯೋಗ ಭತ್ಯೆಯನ್ನು ರಾಹುಲ್ ಗಾಂಧಿ ಅವರಿಗೆ ಮತ್ತು ಯಾತೀದ್ರ ಸಿದ್ದರಾಮಯ್ಯ ಅವರಿಗೆ ಪದವಿ ಮುಗಿದಿದ್ದರೆ ದಯಪಾಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಇದು ತಮಾಷೆಯಾಗಿ ಕಂಡರೂ ಭಜರಂಗದಳವನ್ನು ಟೀಕೆ ಮಾಡಿದ್ದಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಕಾಂಗ್ರೆಸ್ ಗುರಿಯಾಗಿದೆ, ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಮತ್ತೆ ಸಾಬೀತು ಪಡಿಸಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.