ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ಯೋಜನೆ ರೂಪಿಸುತ್ತಿರುವ ಕಾಂಗ್ರೆಸ್

ಗೋ ಹತ್ಯೆ ನಿಷೇಧ ಕಾಯ್ದೆಯ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಪಶು ಸಂಗೋಪನ ಸಚಿವ ವೆಂಕಟೇಶ್ ಅವರು ಎಮ್ಮೆ , ಕೋಣಗಳನ್ನು ಕಡಿಯುವುದಾದರೆ ಹಸುವನ್ನು ಏಕೆ ಕಡಿಯಬಾರದು ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ ಅದರಲ್ಲಿ ಒಂದು ಹಸು ಸತ್ತಾಗ ಅದನ್ನು ಗುಂಡಿ ತಗೆದು ಹೂಳಲು ತುಂಬಾ ಕಷ್ಟವಾಯಿತು , 25 ಜನ ಬಂದರು ಸತ್ತ ಹಸುವಿನ ಮೃತ ದೇಹವನ್ನು ಎತ್ತಲು ಸಾಧ್ಯವಾಗಲಿಲ್ಲ ಕೊನೆಗೆ ಜೆಸಿಬಿ ತರಿಸಿ ಹೂಳಲಾಯಿತು, ಹೀಗಾಗಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆಯ ವಿವರ

1966 ರಲ್ಲಿ ಎಸ್. ನಿಜಲಿಂಗಪ್ಪ ಅವರ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮೊದಲ ಬಾರಿಗೆ ಜಾರಿಗೆ ತರುತ್ತಾರೆ. ಆದರೆ ಆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲನೆಯಾಗಿರಲಿಲ್ಲ , 2010 ರಲ್ಲಿ ಬಿ. ಎಸ್. ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಮರು ಜಾರಿ ಮಾಡಿತ್ತು ಆದರೆ 2013 ರಲ್ಲಿ ಕಾಂಗ್ರಸ್ ನ ಸಿದ್ದರಾಮಯ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮತ್ತೆ ರದ್ದು ಪಡಿಸಿತ್ತು. 2022 ರಲ್ಲಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಜಾನುವಾರುಗಳನ್ನು ಹತ್ಯೆ ಮಾಡುವುದು ಅಪರಾಧವೆಂದು ಘೋಷಿಸಿ ಗೋ ಹತ್ಯೆ ಮಾಡಿದವರಿಗೆ 4 – 7 ವರ್ಷ ಜೈಲು ಶಿಕ್ಷೆ , 50 ಸಾವಿರದಿಂದ 5 ಲಕ್ಷದ ವರೆಗೆ ದಂಡವನ್ನು ವಿಧಿಸಲು ಅಧಿಸೂಚನೆಯನ್ನು ಹೊರಡಿಸಿತ್ತು, ಅಧಿಸೂಚನೆಯನ್ನು ಹೊರಡಿಸಿದ ಬಳಿಕ ಸೆಪ್ಟೆಂಬರ್ ವರೆಗೆ 6721 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿತ್ತು.

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಲೆಲ್ಲಾ ಗೋ ಹತ್ಯ ನಿಷೇಧ ಕಾಯ್ದೆಯನ್ನು ರದ್ದು ಪಡಿಸಿ ಪದೇ ಪದೇ ಹಿಂದೂ ವಿರೋಧಿ ಕಾಂಗ್ರೆಸ್ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದಾರೆ. ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಕೇವಲ ವೋಟ್ ಬ್ಯಾಂಕಿಗೋಸ್ಕರ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದೆ, ಈಗಲಾದರೂ ಎಲ್ಲಾ ಹಿಂದೂಗಳು ಎಚ್ಚರವಹಿಸಬೇಕು ಎಂದು ಹೇಳಲಾಗುತ್ತಿದೆ.