ತುಮಕೂರು : ಶನಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸದ್ಯದಲ್ಲೇ 15 ಸಾವಿರ ಕಾನ್‌ಸ್ಟಬಲ್ ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸಬ್ಇನ್ಸ್ಪೆಕ್ಟರ್ ಹಗರಣದ ತನಿಖೆ ಮುಂದುವರಿದಿದ್ದು 53 ತಪ್ಪಿತಸ್ತರು ಎಂದು ತಿಳಿದು ಬಂದಿದೆ, ಆದರೆ ಮರು ತನಿಖೆ ನೆಡೆಸದಂತೆ ಹೈ ಕೋರ್ಟ್ ಆದೇಶ ನೀಡಿದೆ, ಅರ್ಹ ತಜ್ಞರ ಸಲಹೆಯನ್ನು ಪಡೆದು ಅರ್ಹರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅತೀ ಶೀಘ್ರದಲ್ಲಿ ಕಾನ್‌ಸ್ಟಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಹೇಳಿದರು.