ತುರುವೇಕೆರೆ : DMO ಡಾ. ಟಿ ಎನ್. ಪುರುಷೋತ್ತಮ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ತುರುವೇಕೆರೆ : ಕರ್ತವ್ಯದಿಂದ ನಿವೃತ್ತಿ ಹೊಂದಿದ ಡಾ. ಟಿ. ಎನ್. ಪುರುಷೋತ್ತಮ್ (DMO) ಅವರಿಗೆ ತುರುವೇಕೆರೆ (THO) ತಾಲ್ಲೋಕು ಆಡಳಿತ ವೈಧ್ಯಾಧಿಕಾರಿಗಳ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ತಾಲ್ಲೋಕು ವೈಧ್ಯಾಧಿಕಾರಿಗಳಾದ ಡಾ. ಸುಪ್ರಿಯಾ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸುಪ್ರಿಯಾ ಅವರು ಡಾ. ಪುರುಷೋತ್ತಮ್ ಅವರು ನೆಡೆದುಬಂದ ಹಾದಿ, ಅವರ ಸಾಧನೆಗಳು, ಹಾಗೂ ತಾಲ್ಲೋಕಿಗೆ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದಾಗ ನೀಡಿದ ಅಪಾರ ಸೇವೆಗಳ ಬಗ್ಗೆ ಮಾತನಾಡಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ತುರುವೇಕೆರೆ ತಾಲ್ಲೋಕಿನ ಎಲ್ಲಾ ವೃಂದದ ಅರೋಗ್ಯಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಪುರುಷೋತ್ತಮ್ ಅವರನ್ನು ಉದ್ದೇಶಿಸಿ ಮಾತನಾಡಿ , ಸನ್ಮಾನಿಸಿ ಬೀಳ್ಕೊಡುಗೆ ಸಮಾರಂಭವನ್ನು ಆಚರಣೆ ಮಾಡಿದರು, ನಂತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.