1 ತಿಂಗಳಿಂದ ಮುರಿದ ಕಂಬದ ಬಗ್ಗೆ ಗಮನ ಹರಿಸದ ಹೊಸಕೆರೆ ಬೆಸ್ಕಾಂ ಅಧಿಕಾರಿಗಳು

ಹೊಸಕೆರೆ : ಪತಿಯಪ್ಪನ ಪಾಳ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಳೆದ ಒಂದು ತಿಂಗಳಿಂದ ಮುರಿದಿರುವ ವಿದ್ಯುತ್ ಕಂಬದ ಬಗ್ಗೆ ಯಾವುದೇ ರೀತಿಯ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಗುಬ್ಬಿ ತಾಲ್ಲೋಕಿನ ಹಾಗಲವಾಡಿ ಹೋಬಳಿಯ ಪತಿಯಪ್ಪನ ಪಾಳ್ಯ ಎಂಬ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಪ್ರೈಮರಿ ಲೈನ್ ವಿದ್ಯುತ್ ಕಂಬ ಮುರಿದಿದ್ದು ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದು ಕಂಡು ಬಂದಿಲ್ಲ, ಆ ರಸ್ತೆಯು ಪತಿಯಪ್ಪನ ಪಾಳ್ಯ ಗ್ರಾಮದ ಮುಖ್ಯ ರಸ್ತೆಯಾಗಿದ್ದು ದಿನನಿತ್ಯವೂ ಅದೇ ರಸ್ತೆಯಲ್ಲಿ ಶಾಲಾ ಮಕ್ಕಳು, ವಯೋವೃದ್ದರು, ಗ್ರಾಮದ ಎಲ್ಲಾ ಜನರು ಓಡಾಡುತ್ತಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆ ನೆಡೆಯುವ ಮುನ್ನ ಬೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಗ್ರಾಮಸ್ಥರಾದ ತಿಳಿಸಿದರು.