ಚುಚ್ಚು ಮದ್ದು ಪಡೆದ 2 ತಿಂಗಳ ಮಗು ಮೃತಪಟ್ಟಿದೆ ! ಸರ್ಕಾರಿ ವೈಧ್ಯರ ನಿರ್ಲಕ್ಷ್ಯ

ಚಿಕ್ಕನಾಯಕನಹಳ್ಳಿ : ತಾಲ್ಲೋಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಮಕ್ಕಳಿಗೆ ಚುಚ್ಚುಮದ್ದು ನೀಡಿದ ಬಳಿಕ ಸೋಮನಹಳ್ಳಿ ಗ್ರಾಮದ ಮಧು ಮತ್ತು ಶೃತಿ ದಂಪತಿಯ 2 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ನೆಡೆದಿದೆ, ವೈಧ್ಯರ ಮತ್ತು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನೆಡೆದಿದೆ ಎಂದು ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದರು.

ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೇ ಫೋನ್ ಬಳಸಿಕೊಂಡು ಸರಿಯಾಗಿ ಗಮನ ಹರಿಸದೆ ಬೇಕಾಬಿಟ್ಟಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ ಅದರ ಜೊತೆಗೆ 50 ರಿಂದ 100 ರೂ ಹಣವನ್ನು ಸಹ ವಸೂಲಿ ಮಾಡುತ್ತಾರೆ, ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬರುವುದಿಲ್ಲ ಎಂದು ವೈಧ್ಯರ ವಿರುದ್ಧ ಪ್ರತಿಭಟನಾಕಾರರು ಆರೋಪಿಸಿ ಮೇಲಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.

ತಾಲ್ಲೋಕು ಆರೋಗ್ಯಧಿಕಾರಿ ಡಾ.ಸಿ. ಆರ್. ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಈಗಿರುವ ವೈದ್ಯ ಮಧು ಅವರ ಬದಲಿಗೆ ಡಾ. ಸ್ವರೂಪ್ ಅವರನ್ನು ನಿಯೋಜಿಸಿ ಹಾಗೂ ಒಬ್ಬ ಆಶಾ ಕಾರ್ಯಕರ್ತೆಯನ್ನು ಬದಲಾಯಿಸಲು ಕ್ರಮ ವಹಿಸಲಾಗಿದೆ ಎಂದರು.