ಯಮಸ್ವರೂಪಿ ಡಾ. ಮುರುಳೀಧರ್ ! ತುರುವೇಕೆರೆ ಸಾರ್ವಜನಿಕ ಆಸ್ಪತ್ರೆ

ತುರುವೇಕೆರೆ : ತಾಲ್ಲೋಕು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಮುರುಳೀಧರ್ ಅವರು ತಮ್ಮ ಓಂಕಾರ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ ತಕ್ಷಣವೇ ಮಗು ಸಾವನ್ನಪ್ಪಿದ್ದರೂ ಸಹ ಮಗು ಜೀವಂತವಾಗಿದೆ ಎಮರ್ಜೆನ್ಸಿ ಇದೆ ಎಂದು ಸುಳ್ಳು ಹೇಳಿ ತುರ್ತಾಗಿ ಬೇರೊಂದು ಖಾಸಗಿ ಆಸ್ಪತ್ರೆಗೆ ಕಳುಹಿಸಿದ ಘಟನೆ ನೆಡೆದಿದೆ, ವೈಧ್ಯರ ನಿರ್ಲಕ್ಷದಿಂದ ಹಾಗೂ ಹಣದ ಆಸೆಯಿಂದ ಈ ಘಟನೆ ನೆಡೆದಿದೆ ಎಂದು ಪೋಷಕರು, ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ, ಕೊನೆಗೆ ಪರಿಹಾರವಾಗಿ 5 ಲಕ್ಷ ರೂ ಗಳನ್ನು ಕೊಡುವುದಾಗಿ ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ( ಓಂಕಾರ್ ಆಸ್ಪತ್ರೆ )ಇರುವುದು ಕಂಡು ಬಂದಿದೆ, ಹಾಗೂ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬರುವವರನ್ನು ತಮ್ಮದೇ ಖಾಸಗಿ ಆಸ್ಪತ್ರೆಗೆ ಕರೆಸಿ ಪ್ರತಿಯೊಬ್ಬರಿಗೂ 60 ರಿಂದ 70 ಸಾವಿರದ ವರೆಗೆ ಬಿಲ್ ಮಾಡಿ ಅಲ್ಲೇ ಹೆರಿಗೆ ಮಾಡುತ್ತಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ ಒಟ್ಟು ಸಾರ್ವಜನಿಕ ಆಸ್ಪತ್ರೆಯಲ್ಲಿ – 30 ಹೆರಿಗೆ ಮಾಡಿದ್ದಾರೆ, ಆದರೆ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ 92 ಹೆರಿಗೆಗಳನ್ನು ಮಾಡಿದ್ದಾರೆ.

ಡಾ. ಮುರುಳೀಧರ್, ಅವರು ಮಾಡುತ್ತಿರುವ ಈ ಕೆಲಸಗಳು ಹಾಗೂ ಕರ್ತವ್ಯದ ಸಮಯದಲ್ಲಿ ಸೇವೆ ಸಲ್ಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು, ಮೇಲಾಧಿಕಾರಿ, ತಾಲ್ಲೋಕು ಅರೋಗ್ಯಧಿಕಾರಿಗಳಾದ ಡಾ. ಸುಪ್ರಿಯಾ ಅವರ ಗಮನಕ್ಕೆ ಕಂಡು ಬಂದಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ. ಟಿ. ಕೃಷ್ಣಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಇನ್ನು ಮುಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂದು ಹೇಳಿಕೆ ಕೊಟ್ಟಿದ್ದಾರೆ.