ಕಾರ್ಯಕರ್ತರಿಗಾಗಿ ಸಹಾಯವಾಣಿ ಆರಂಭಿಸಿದ ಬಿಜೆಪಿ ! ಕಾರ್ಯಕರ್ತರ ನೆರವಿಗೆ ಕಾನೂನು ತಂಡ

ಬೆಂಗಳೂರು : ಬಿಜೆಪಿ ಮತ್ತು RSS ಕಾರ್ಯತರ ವಿರುದ್ಧ ಕಾಂಗ್ರೆಸ್ ಸರ್ಕಾರದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಇದೀಗ ಬಿಜೆಪಿ ಕಾರ್ಯಕರ್ತರಿಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.

ಸಹಾಯವಾಣಿ – 18003091907

ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಮಾತನಾಡಿ , ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ಧಾಖಲಿಸುವುದನ್ನು ತಡೆಯಲು ಈ ಸಹಾಯವಾಣಿಯನ್ನು ಆರಂಭಿಸಿದ್ದೇವೆ, ರಾಜ್ಯದಂತ ಸುಮಾರು 100 ವಕೀಲರನ್ನು ಹೊಂದಿದ್ದು ಇವರು ನೇರವಾಗಿ ಕಾರ್ಯಕರ್ತರಿಗೆ ನೇರವಾಗಲಿದ್ದಾರೆ ಎಂದು ಹೇಳಿದ್ದಾರೆ.

ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ, ಬಿಜೆಪಿಯ ಕಾರ್ಯಕರ್ತ ಎದೆಗುಂದುವವನಲ್ಲ. ರಾಷ್ಟ್ರಪರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ನಮ್ಮ ಸಮಸ್ತ ಕಾರ್ಯಕರ್ತರ ಪರವಾಗಿ ಪಕ್ಷವೂ ಸದಾ ನಿಲ್ಲುತ್ತದೆ ಮತ್ತು ಅವಶ್ಯಕವಾದಲ್ಲಿ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಲಿದೆ. ದೇಶವಿರೋಧಿಗಳ ವಿರುದ್ಧ, ನಾಡಿಗೆ ಕೇಡು ಬಗೆಯುವವರ ವಿರುದ್ಧ, ರಾಜ್ಯ ಸರ್ಕಾರದ ಜನವಿರೋಧಿ ನಡೆಗಳ ವಿರುದ್ಧ, ಎದೆಗುಂದದೆ ಹೋರಾಡಿ ನಿಮ್ಮೊಂದಿಗೆ ಪಕ್ಷವಿದೆ, ಪಕ್ಷದಿಂದ ನಿಯೋಜನೆಗೊಂಡಿರುವ ಕಾನೂನು ತಜ್ಞರ ಸಮಿತಿ ಸದಾ ಸಿದ್ದವಿದೆ. ಎಂದು ಬಿಜೆಪಿ ಟ್ವೀಟ್ ಮಾಡಿದೆ.