ಕಾಂಗ್ರೆಸ್ ಮಾಡಿದ ಎಡವಟ್ಟಿನಿಂದ ! ಹಿಂದೂಗಳ ಆಸ್ತಿ ವಕ್ಫ್ ಮಂಡಳಿಗೆ ಸ್ವಾಹ

ವಕ್ಫ್ ಮಂಡಳಿಯು ಮುಸ್ಲಿಂ ಧರ್ಮದ ಹೆಸರಿನಲ್ಲಿ ಯಾವ ಆಸ್ತಿಯನ್ನು ಬೇಕಾದರೂ ಕಬಳಿಸುವಷ್ಟು ಅಧಿಕಾರವನ್ನು ಹೊಂದಿದೆ.

ವಕ್ಫ್ ಕಾಯಿದೆಯನ್ನು ಮೊದಲು 1954 ರಲ್ಲಿ ಸಂಸತ್ತು ಅಂಗೀಕರಿಸಿತ್ತು, ಮತ್ತೆ ಅದನ್ನು ರದ್ದು ಮಾಡಲಾಗಿತ್ತಾದರೂ ನಂತರ 1995 ರಲ್ಲಿ ಮರು ಜಾರಿಗೊಳಿಸಿದರು.

ಕಾಂಗ್ರೆಸ್ ಸರ್ಕಾರವು 2013 ರಲ್ಲಿ ಈ ಕಾಯಿದೆಯನ್ನು ತಿದ್ದುಪಡಿ ಮಾಡಿ ವಕ್ಫ್ ಬೋರ್ಡ್ ಗೆ ಅಧಿಕಾರವನ್ನು ಹೆಚ್ಚಿಸಿತು, ವಕ್ಫ್ ಬೋರ್ಡ್ ಯಾರ ಆಸ್ತಿಯನ್ನು ಬೇಕಾದರೂ ಕಸಿದುಕೊಳ್ಳುವಷ್ಟು ಅನಿಯಮಿತ ಅಧಿಕಾರವನ್ನು ನೀಡಲಾಯಿತು ಇದನ್ನು ಯಾವುದೇ ನ್ಯಾಯಾಲಯವು ಪ್ರಶ್ನೆ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ಕಾಂಗ್ರೆಸ್ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ, 2014 ರ ಲೋಕಸಭಾ ಚುನಾವಣೆ ಪ್ರಾರಂಭವಾಗುವ ಮೊದಲು ಕಾಂಗ್ರೆಸ್ ಸರ್ಕಾರವು ವಕ್ಫ್ ಕಾಯ್ದೆಯನ್ನು ಅನುಸರಿಸಿ ದೆಹಲಿಯಲ್ಲಿ 123 ಪ್ರಧಾನ ಆಸ್ತಿಯನ್ನು ವಕ್ಫ್ ಬೋರ್ಡ್ ಗೆ ಉಡುಗೊರೆಯಾಗಿ ನೀಡಿದೆ.

ತಮಿಳುನಾಡಿನ ತಿರುಚೇಂದುರೈ ಗ್ರಾಮ ಸೇರಿ ಇನ್ನೂ 5 ಗ್ರಾಮಗಳನ್ನು 1000 ಎಕರೆಗೂ ಹೆಚ್ಚು ಮತ್ತು 1500 ವರ್ಷದ ಹಳೆಯ ಚಂದ್ರಶೇಖರ ದೇವಾಲಯ ಹಾಗೂ ಅದರ 450 ಎಕರೆ ಜಾಗವನ್ನು ವಕ್ಫ್ ಬೋರ್ಡ್ ತಮಿಳುನಾಡು ವಶ ಪಡಿಸಿಕೊಂಡಿದೆ , ಕರ್ನಾಟಕದ ಗುಲ್ಬರ್ಗದಲ್ಲಿ 27 ಸಾವಿರ ಎಕರೆಗೂ ಹೆಚ್ಚು ಆಸ್ತಿಯನ್ನು ಇತ್ತೀಚೆಗೆ ಕಬಳಿಸಿದೆ, ಇದೀಗ ಭಾರತದಲ್ಲಿ 3ನೇ ಅತೀ ದೊಡ್ಡ ಅಸ್ತಿ ಹೊಂದಿರುವ ಹೆಸರನ್ನು ವಕ್ಫ್ ಬೋರ್ಡ್ ತನ್ನದಾಗಿಸಿಕೊಂಡಿದೆ.

ನಿಮ್ಮ ಗ್ರಾಮ ನಿಮ್ಮ ಆಸ್ತಿಯನ್ನು ವಕ್ಫ್ ಮಂಡಳಿ ಕಬಳಿಸಿದರೆ ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನೆ ಮಾಡುವಷ್ಟು ಅಧಿಕಾರವನ್ನು ನೀವು ಹೊಂದಿರುವುದಿಲ್ಲ ಒಂದು ವೇಳೆ ನ್ಯಾಯಾಲದ ಮೊರೆ ಹೋಗುವುದಾದರೆ ವಕ್ಫ್ ನ್ಯಾಯಾಲಕ್ಕೆ ಹೋಗಬೇಕು, ವಕ್ಫ್ ನ್ಯಾಯಾಲಯವು ನಿಮಗೆ ವಾಪಸ್ ಕೊಟ್ಟು ಇದು ವಕ್ಫ್ ಆಸ್ತಿಯಲ್ಲ ಇದು ನಿಮ್ಮ ಆಸ್ತಿ ಅಂತ ಹಿಂತಿರುಗಿಸಿದರೆ ಮಾತ್ರ ಅದು ನಿಮ್ಮ ಆಸ್ತಿಯಾಗಿರುತ್ತದೆ ಹೊರೆತು ಇನ್ಯಾವುದೇ ನ್ಯಾಯಾಲಯದಲ್ಲಿ ವಕ್ಫ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತಿಲ್ಲ.

ಸರಳವಾಗಿ ಹೇಳಬೇಕಾದರೆ ವಕ್ಫ್ ಮಂಡಳಿಯು ಮುಸ್ಲಿಂ ಧರ್ಮದ ಹೆಸರಿನಲ್ಲಿ ಆಸ್ತಿಯನ್ನು ವಶ ಪಡೆಸಿಕೊಳ್ಳಲು ಅನಿಯಮಿತ ಅಧಿಕಾರವನ್ನು ಹೊಂದಿದೆ. ಈ ರೀತಿಯ ಅಧಿಕಾರ ಇರುವುದು ಕೇವಲ ಮುಸ್ಲಿಂ ಧರ್ಮದವರಿಗೆ ಹೊರೆತು ಇನ್ಯಾವುದೇ ಧರ್ಮದವರಿಗೂ ಇಲ್ಲ. ವಕ್ಫ್ ಇದೇ ರೀತಿ ಆಸ್ತಿ ಕಬಳಿಕೆಯನ್ನು ಮುಂದುವರೆಸಿಕೊಂಡು ಹೋದರೆ ವಕ್ಫ್ ಕೊನೆಗೆ ಇಡೀ ಭಾರತವನ್ನೇ ತನ್ನದಾಗಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.