SIT ಕಾಲೇಜು ವಿದ್ಯಾರ್ಥಿಗಳಿಂದ ಅನಿಮಲ್ ವಾಟರ್ ಬೌಲ್ ಗಳ ವಿತರಣೆ ! ತುಮಕೂರು

ತುಮಕೂರು : ನಗರದ ಪ್ರತಿಷ್ಟಿತ SIT ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು WATER FOR VOICELESS ಎನ್ನುವ ಪ್ರಾಜೆಕ್ಟ್ ಅನ್ನು ಹಮ್ಮಿಕೊಂಡಿದ್ದು ಇದರಿಂದ ಪಕ್ಷಿಗಳ ದಾಹ ಇಂಗಿಸುವ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಿದ್ದಾರೆ.

ತುಮಕೂರು ನಗರದ ಪೊಲೀಸ್ ಠಾಣೆಗಳ ಆವರಣದಲ್ಲಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ ಪಕ್ಷಿಗಳಿಗೆ ನೀರಿನ ದಾಹವನ್ನು ಇಂಗಿಸಲು ಸಿಮೆಂಟ್ ಅನಿಮಲ್ ವಾಟರ್ ಬೌಲ್ ಗಳನ್ನು SIT ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಅವರಿಗೆ ನೀಡಿದರು , ವಿದ್ಯಾರ್ಥಿಗಳ ಈ ಕೆಲಸವನ್ನು ಶ್ರೀ ರಾಹುಲ್ ಕುಮಾರ್ ಅವರು ಅಭಿನಂದಿಸಿದರು.