ತುರುವೇಕೆರೆ : ಪ್ರಾಥಮಿಕ ಆರೋಗ್ಯ ಕೇಂದ್ರ ಮಾವಿನಕೆರೆ ಹಾಗೂ ತಾಲ್ಲೋಕು ಆರೋಗ್ಯಾಧಿಕಾರಿಗಳು, ಮಾವಿನಕೆರೆ ಮತ್ತು ಮುತ್ತುಗದಹಳ್ಳಿ ಗ್ರಾಮ ಪಂಚಾಯತಿಯವರ ಸಹಯೋಗದೊಂದಿಗೆ ದಿನಾಂಕ 17/6/23 ರ ಶನಿವಾರ ಬೆಳಗ್ಗೆ 10 ಗಂಟೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಾವಿನಕೆರೆ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ರಕ್ತದಾನ ಶಿಬಿರದಲ್ಲಿ 18 ವರ್ಷ ಮೇಲ್ಪಟ್ಟ ಯಾವುದೇ ಆರೋಗ್ಯವಂತರು ರಕ್ತದಾನ ಮಾಡಬಹುದು, ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬಹುದು, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ತುಮಕೂರು ವತಿಯಿಂದ ದಾನಿಗಳಿಗೆ ಉಚಿತವಾಗಿ ರಕ್ತದ ಗುಂಪು ಹಾಗೂ ಇತರೆ ರಕ್ತ ಪರೀಕ್ಷೆ ಮಾಡಲಾಗುವುದು.
ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಈ ಮಹಾದಾನಕ್ಕೆ ಪಾತ್ರರಾಗಬೇಕೆಂದು ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ವಿನಂತಿಸಿದ್ದಾರೆ.