ಸಮುದ್ರದಡಿಯಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಐವರು ಸಾವು

ಸಮುದ್ರದಡಿಯಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಶ್ರೀಮಂತ ಪ್ರವಾಸಿಗರು 2ಕೋಟಿಗೂ ಹೆಚ್ಚು ಹಣವನ್ನು ಪಾವತಿಸಿ ಈ ಪ್ರವಾಸವನ್ನು ಕೈಗೊಂಡಿದ್ದರು ಆದರೆ ಇದೀಗ ಸಾವನ್ನಪಿದ್ದಾರೆ.

ಜೂನ್ 18 ಭಾನುವಾರದಂದು ಸೆಂಟ್ ಜೋನ್ಸ್ ಬಂದರಿನಿಂದ ಈ ಜಲಂತರ್ಗಾಮಿ ನೌಕೆಯು ಹೊರಟು 2ಗಂಟೆಗಳ ನಂತರ ಸಂಪರ್ಕ ಕಳೆದುಕೊಂಡಿತ್ತು, ನಂತರ ಸಬ್ ಮರ್ಸಿಬಲ್ ಕಾಣೆಯಾದ ಸ್ಥಳದ ಸಮುದ್ರದಡಿಯಲ್ಲಿ ಒಂದು ಸದ್ದನ್ನು ಸೋನಾರ್ ಯಂತ್ರಗಳು ಗ್ರಹಿಸಿದ್ದವು, ಆ ಸದ್ದು ಬಂದತ್ತ ರಕ್ಷಣಾ ತಂಡಗಳು ಧಾವಿಸಿ ಕಾರ್ಯಾಚರಣೆ ನೆಡೆಸಿದ್ದವು.ಜಲಂತರ್ಗಾಮಿ ನೌಕೆಯನ್ನು ಪತ್ತೆಹಚ್ಚಲು ಅಮೆರಿಕ, ಫ್ರಾನ್ಸ್, ಕೆನಡಾ ನೌಕಾಪಡೆಗಳು ಹರಸಾಹಸ ಪಡುತ್ತಿವೆ.

ಸಮುದ್ರದಡಿಯಿಂದ ವಾಪಸ್ ಬರಬೇಕಿದ್ದ ನೌಕೆ ಇನ್ನೂ ಪತ್ತೆಯಾಗಿಲ್ಲ, ನೌಕೆಯಲ್ಲಿ ಕೇವಲ 96 ಗಂಟೆಗಳಿಗೆ ಆಗುವಷ್ಟು ಆಮ್ಲಜಾನಕವಿತ್ತು , ಒಂದು ವೇಳೆ ನೌಕೆಯು ಮೇಲಕ್ಕೆ ಬಂದರೂ ಸಹ ಅದರ ಬಾಗಿಲನ್ನು ತೆರೆದುಕೊಂಡು ಹೊರಗಡೆ ಬರಲು ಸಾಧ್ಯವೇ ಇಲ್ಲ ಏಕೆಂದರೆ ಹೊರಗಿನಿಂದ ಬಾಗಿಲನ್ನು ನಟ್ – ಬೋಲ್ಟ್ ಹಾಕಿ ಸೀಲ್ ಮಾಡಲಾಗಿದೆ, ಜೊತೆಗೆ ಆಮ್ಲಜನಕದ ಸಂಗ್ರಹವು ಸಹ ಖಾಲಿಯಾಗಿದ್ದು ಯಾತ್ರಿಕರು ಮೃತಪಟ್ಟಿರುವುದು ಖಚಿತವಾಗಿದೆ.

20 ನೇ ಶತಮಾನದ ಆರಂಭದಲ್ಲಿ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದ ದುರಂತ, 1912 ಏಪ್ರಿಲ್ 10 ನೇ ತಾರೀಕಿನಂದು ನೆಡೆದಿತ್ತು, ಬ್ರಿಟನ್ ನಿಂದ ನ್ಯೂಯಾರ್ಕ್ ಗೆ ಪ್ರಯಾಣ ಬೆಳಸಿದ್ದ ಟೈಟಾನಿಕ್ ಹಡಗು ಏಪ್ರಿಲ್ 14 ನೇ ತಾರೀಕು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದ ಪರಿಣಾಮ ಹಡಗು ನೀರಿನಲ್ಲಿ ಮುಳುಗಿ 1500 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದರು. ಆದರೆ ಈಗ ಆ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು 12,500 ಅಡಿಗಳಷ್ಟು ದೂರ ಹೋದ ಐವರು ಸಹ ಪ್ರಾಣಬಿಟ್ಟಿದ್ದಾರೆ.

ನೌಕೆಯಲ್ಲಿ ಇದ್ದವರು

  • 1. ಹಮಿಷ್ ಹಾರ್ಡಿಂಗ್(58)
  • 2. ಸ್ಟಾಕ್ ಟನ್ ರಷ್(61)
  • 3. ಪಾಲ್ ಹೆನ್ರಿ ನಾರ್ಗಿಯೂಲೆಟ್(77)
  • 4. ಸುಲೇಮಾನ್(19)
  • 5. ಶಹಾಜಾದ್ ದಾವೂದ್(48)

3800 ಮೀಟರ್ (12,500ಅಡಿ) ಆಳದಲ್ಲಿ ಉಷ್ಣಾಂಶವೇ ಇರುವುದಿಲ್ಲ ಅಂತಹ ಥoಡಿಯ ಪ್ರದೇಶದಲ್ಲಿ ಇಷ್ಟು ದೀರ್ಘಾವಧಿಯವರೆಗೆ ಟೈಟಾನ್ ಜಲಂತರ್ಗಾಮಿ ನೌಕೆಯ ಬ್ಯಾಟರಿಗಳು ಎಲೆಕ್ಟ್ರಾನಿಕ್ ಉಪಕರಣಗಳು ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ.