ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಭದ್ರಾ ಮೆಲ್ದಂಡೆ ಯೋಜನೆಗೆ 5300 ಕೋಟಿ ಮೀಸಲಿಟ್ಟಿತ್ತು ಅಲ್ಲದೇ ಈ ಯೋಜನೆಯನ್ನು ರಾಷ್ಟೀಯ ಯೋಜನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.
ಕರ್ನಾಟಕದಲ್ಲಿ ಅತ್ಯಂತ ಮಹತ್ವ ಪಡೆದಿರುವ ಭದ್ರಾ ಮೆಲ್ದಂಡೆ ನೀರಾವರಿ ಯೋಜನೆಯು ಚಿಕ್ಕಮಗಳೂರು, ಚಿತ್ರದುರ್ಗ,ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ 787 ಗ್ರಾಮಗಳು ಹಾಗೂ ಬರೋಬ್ಬರಿ 367 ಕೆರೆಗಳ ಜೀವ ತುಂಬಿಸುತ್ತದೆ ಮತ್ತು ಈ ಯೋಜನೆಯಡಿಯಲ್ಲಿ 74.26 ಲಕ್ಷ ಜನರಿಗೆ ಉಪಯೋಗವಾಗಲಿದೆ.
ಹಲವು ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಮಹತ್ವದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಚುರುಕು ಮುಟ್ಟಿಸಿದ್ದು, ಈ ಯೋಜನೆಗಾಗಿ 5300 ಕೋಟಿ ರೂ ಬಿಡುಗಡೆ ಮಾಡುವ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ,ದಾವಣಗೆರೆ ತುಮಕೂರು ಜಿಲ್ಲೆಗಳ ನೀರಿನ ದಾಹಕ್ಕೆ ಮಂಗಳ ಹಾಡಿದ್ದಾರೆ, ಒಟ್ಟು ಈ ಯೋಜನೆಯಡಿಯಲ್ಲಿ 29.9 ಟಿಎಂಸಿ ನೀರನ್ನು ಬಳಸಲು ಸಮ್ಮತಿ ದೊರೆತಿದೆ.