‘ರಾಷ್ಟ್ರ ಪ್ರಶಸ್ತಿ’ ಪಡೆದ ಹೊನ್ನಳ್ಳಿ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ : ನಾಗರತ್ನ. ಟಿ

ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲ್ಲೋಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕಿ ನಾಗರತ್ನ. ಟಿ ಅವರಿಗೆ ”ರಾಷ್ಟ್ರ ಪ್ರಶಸ್ತಿ” ದೊರೆತಿದೆ.

ನಾಗರತ್ನ. ಟಿ ಅವರು ಪ್ರಸ್ತುತ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಉಪ ಕೇಂದ್ರದ 5 ಗ್ರಾಮಗಳಲ್ಲಿ ಹೆರಿಗೆ, ಕುಟುಂಬ ಕಲ್ಯಾಣ, ನೇತ್ರ ಶಸ್ತ್ರಚಿಕಿತ್ಸೆ ಮುಂತಾದ ಆರೋಗ್ಯ ಸೇವೆಗಳನ್ನು ಸುಧಾರಿಸುತ್ತಿದ್ದಾರೆ, ಕೋವಿಡ್ ಸಮಯದಲ್ಲಿ ಕೊರೋನ ವಾರಿಯರ್ ಆಗಿ 35 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಿದ್ದಾರೆ ಇನ್ನೂ ಮುಂತಾದ ಆರೋಗ್ಯ ಸೇವೆಗಳಲ್ಲಿ ಭಾಗಿಯಾಗಿ ರೋಗಿಗಳನ್ನು ಪೋಷಿಸಿದ್ದಾರೆ, ಶ್ರೀಮತಿ ಟಿ. ನಾಗರತ್ನ ಅವರ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ‘ರಾಷ್ಟ್ರ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದರು.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯರನ್ನು ಗುರುತಿಸಿ, ಅವರು ಮಾಡಿರುವ ಕೆಲಸ ಸಾಧನೆಗಳಿಗೆ ಬೆಲೆಕೊಟ್ಟು ಅವರಿಗೆ ಪ್ರಶಸ್ತಿಯನ್ನು ನೀಡುವ ಕೆಲಸಗಳನ್ನು ನರೇಂದ್ರ ಮೋದಿ ಆಡಳಿತದಲ್ಲಿ ರಾಷ್ಟ್ರಪತಿಗಳು ಮಾಡುತ್ತಿದ್ದು ಆ ಸಾಲಿನಲ್ಲಿ ಈಗ ಆರೋಗ್ಯ ಸಿಬ್ಬಂದಿಗಳಿಗೆ ಪ್ರಶಸ್ತಿ ದೊರೆಯುತ್ತಿರುವುದು ಆರೋಗ್ಯ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ಹೆಮ್ಮೆ ಪಡುವ ವಿಷಯವಾಗಿದೆ.