ನಾಳೆ 5 ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ ! ಧಾರವಾಡ – ಬೆಂಗಳೂರು

ಧಾರವಾಡ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸೇರಿ ಐದು ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೆಮಿ-ಹೈಸ್ಪೀಡ್ ರೈಲುಗಳನ್ನು ಒಂದೇ ದಿನ ಪ್ರಧಾನಿ ನರೇಂದ್ರ ಮೋದಿ ಆನ್ ಲೈನ್ ಮೂಲಕ ನಾಳೆ ಜೂನ್ 27 ರಂದು ಉದ್ಘಾಟಿಸಲಿದ್ದಾರೆ, ಉದ್ಘಾಟನೆಯ ನಂತರ 10:35ಕ್ಕೆ ಧಾರವಾಡ ರೈಲು ನಿಲ್ದಾಣದಿಂದ ಪ್ರಯಾಣ ಪ್ರಾರಂಭಿಸಲಿದೆ.

ಮೈಸೂರು-ಚೆನ್ನೈ ಸಂಚರಿಸುವ ಸೆಮಿ-ಹೈಸ್ಪೀಡ್ ರೈಲಿನೊಂದಿಗೆದಕ್ಷಿಣ ಭಾರತದ ಪ್ರಪ್ರಥಮ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ ಪಡೆದಿದ್ದ ಕರ್ನಾಟಕ, ಇದೀಗ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪಡೆಯುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಬೆಂಗಳೂರು ಹಾಗೂ ಧಾರವಾಡ ನಗರಗಳ ನಡುವೆ ತ್ವರಿತ ಸಂಪರ್ಕ ಕಲ್ಪಿಸುವ ಈ ರೈಲು ಹುಬ್ಬಳ್ಳಿ, ಹಾವೇರಿ,ರಾಣಿಬೆನ್ನೂರು, ಹರಿಹರ,ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ಅಮ್ಮಸಂದ್ರ, ತುಮಕೂರು,ಚಿಕ್ಕಬಾಣಾವರ, ಯಶವಂತಪುರ ಜಂಕ್ಷನ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ, ಹಾಗೂ ಸಂಪೂರ್ಣವಾಗಿ ಕರ್ನಾಟಕದಲ್ಲಿಸಂಚರಿಸುವ ಮೊದಲನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಎನಿಸಲಿದೆ.