ರಸ್ತೆ ಜಾಲದಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ 2ನೇ ಸ್ಥಾನಕ್ಕೆ ಜಿಗಿದ ಭಾರತ

ವಿಶ್ವದಲ್ಲೇ ಅತೀ ದೊಡ್ಡ ರಸ್ತೆ ಜಾಲವನ್ನು ಹೊಂದಿರುವ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಚೀನವನ್ನು ಹಿಂದಕ್ಕೆ ತಳ್ಳಿ ಇದೀಗ ಭಾರತ 2ನೇ ಸ್ಥಾನಕ್ಕೆ ಜಿಗಿದಿದೆ, ಚೀನಾ 3ನೇ ಸ್ಥಾನಕ್ಕೆ ಸರಿದಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಟ್ಕರಿ, ಈ ಸಾಧನೆಯನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸರ್ಕಾರದಲ್ಲಿ ಮಾತ್ರ ಮಾಡಲಾಗಿದೆ, ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದು ಒಂಬತ್ತು ವರ್ಷಗಳು ಪೂರೈಸಿದೆ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶದೆಲ್ಲೆಡೆ ರಸ್ತೆ ಜಾಲ ಗಣನೀಯವಾಗಿ ಶೇಕಡ 59 ರಷ್ಟು ಏರಿಕೆಯಾಗಿದೆ, ಭಾರತದ ರಸ್ತೆ ಜಾಲವು ಸುಮಾರು 64ಲಕ್ಷ ಕಿಲೋಮೀಟರ್ ತಲುಪುವ ಮೂಲಕ ಚೀನವನ್ನು 2ನೇ ಸ್ಥಾನದಿಂದ (63ಲಕ್ಷ ಕಿಲೋಮೀಟರ್) 3ನೇ ಸ್ಥಾನಕ್ಕೆ ತಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ 2013 – 14 ರ ವರೆಗೆ ಕೇವಲ 91,287 ಕಿಲೋಮೀಟರ್ ನಷ್ಟು ರಾಷ್ಟೀಯ ಹೆದ್ದಾರಿಗಳಿದ್ದವು, ಆದರೆ ಪ್ರಧಾನಿ ಮೋದಿ 9 ವರ್ಷಗಳ ಅವಧಿಯಲ್ಲಿ ರಾಷ್ಟೀಯ ಹೆದ್ದಾರಿಗಳನ್ನು 1.45 ಲಕ್ಷ ಕಿಲೋಮೀಟರ್ ನಷ್ಟು ವಿಸ್ತರಿಸಿದ್ದಾರೆ ಎಂದು ಹೇಳಿದರು.