ಹಳೇ ಶಾಲಾ ವಿದ್ಯಾರ್ಥಿಗಳಿಂದ ಗುರುಗಳಿಗೆ ಸನ್ಮಾನ

ಕೊರಟಗೆರೆ/ತೋವಿನಕೆರೆ: ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ, ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ, ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ.

ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ.

ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ೩೦ವರ್ಷಗಳ ನಂತರ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ತಮಗೆ ಪಾಠ ಕಲಿಸಿಕೊಟ್ಟ, ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸಿದ ಹಳೇ ವಿದ್ಯಾರ್ಥಿಗಳು ತಮ್ಮ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಹೀಗೊಂದು ಹೃದಯ ಸ್ಪರ್ಶ ಕಾರ್ಯಕ್ರಮವೊಂದಕ್ಕೆ ಕೊರಟಗೆರೆ ತಾಲ್ಲೂಕು ತೋವಿನಕೆರೆ ಸರ್ಕಾರಿ ಶಾಲೆ ಹಾಗೂ ಗಂಗಾಧರೇಶ್ವರ ಕಾಲೇಜಿನ ೧೯೮೨ ರಿಂದ ೧೯೯೨ನೇ ಬ್ಯಾಚ್ ಹಳೇ ವಿದ್ಯಾರ್ಥಿಗಳು ಒಟ್ಟುಗೂಡಿ ವಿನೂತನವಾಗಿ ಗುರುವಂದನಾವನ್ನು ವಿಧ್ಯೆ ಕಲಿಸಿದ ಗುರುಗಳಿಗೆ ಸನ್ಮಾನಿಸಲು ತಿರ್ಮಾನಿಸಿ ಅವರ ಮನೆಯಂಗಳದಲ್ಲಿ ಅವರ ಕುಟುಂಬದವರೊಂದಿಗೆ ಗುರುಗಳನ್ನು ಸನ್ಮಾನಿಸಲಾಯಿತು.

ಹಿರಿಯ ಶಿಕ್ಷಕರಾದ ಹೊನ್ನಪ್ಪ ಮಾಸ್ಟರ್ ಹಾಗೂ ದೊಡ್ಡಸಿದ್ದಯ್ಯ.ಪಿ.(ಪಿಡಿಎಸ್) ಹಳೆಯ ದಿನಗಳನ್ನು ಮೆಲಕು ಹಾಕಿ ಆನಂದಬಾಷ್ಪದಿಂದ ಸಂತೋಷಪಟ್ಟರು ನನ್ನ ವಿಧ್ಯಾರ್ಥಿಗಳು ಉನ್ನತ್ತ ಮಟ್ಟದಲ್ಲಿರುವುದನ್ನು ಕೇಳಿ ಖುಷಿಪಟ್ಟರು ಹಾಗೂ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಿ, ಶಾಲೆ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ದುಡಿಯಿರಿ, ಮುಂದಿನ ಪೀಳಿಗೆಯ ಯುವಕರಿಗೆ ಮಾರ್ಗದರ್ಶಕರಾಗಿ ಎಂದು ತಿಳಿಸಿದರು.

ಗುರು-ಶಿಷ್ಯರ ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಹಳೇ ವಿದ್ಯಾರ್ಥಿಗಳು ತೋರಿಸಿಕೊಟ್ಟರು ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಯಿತು. ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ. ಗುರುಗಳು ಹಾಗೂ ವಿಧ್ಯಾರ್ಥಿಗಳು ತಮ್ಮ ಜೀವನದ ಘಟನೆಗಳನ್ನು ಮೆಲುಕು ಹಾಕಿದರು. ಗುರುಗಳ ಜೊತೆ ಮಾತುಕಥೆ, ಕುಶುಲೋಪಚಾರಿ, ಗುರುಗಳ ಆರೋಗ್ಯದ ಬಗ್ಗೆ ವಿಚಾರಿಸಿ ಗುರುಗಳ ಅರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳಾದ ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ.ಟಿ.ಎನ್, ಪ್ರಜಾಮನ ಪತ್ರಿಕೆ ಸಂಪಾದಕ ಹಾಗೂ ನಿರ್ದೇಶಕ ಟಿ.ಎಸ್.ಕೃಷ್ಣಮೂರ್ತಿ, ಲಕ್ಕನಾಯಕ, ಶಿವಕುಮಾರ.ಟಿ, ಮಂಜಣ್ಣ ವಕೀಲರು, ನಾಗೇಂದ್ರ. ಟಿ.ಸಿ, ಅಂಜನ್ ಕುಮಾರ್ ಹಲವರು ಹಳೆ ವಿಧ್ಯಾರ್ಥಿಗಳು ಇದ್ದರು.