ಚಿಕ್ಕನಾಯಕನಹಳ್ಳಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಡಿ ಚಾಲ್ತಿಯಲ್ಲಿರುವ ಮಹಿಳೆಯರ ಉಚಿತ ಪ್ರಯಾಣದಿಂದ ಆಗುತ್ತಿರುವ ಕಿರಿಕಿರಿಯಿಂದ ದಿನದಿಂದ ದಿನಕ್ಕೆ ಯಾವುದಾದರೂ ಒಂದು ವಿಷಯದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯು ವಿವಾದದಲ್ಲಿ ಸಿಲುಕುತ್ತಿದೆ, ಅದೇ ರೀತಿ ಇದೀಗ ಚಿಕ್ಕನಾಯಕನಹಳ್ಳಿ ತಾಲ್ಲೋಕಿನ ಬಡಕೇಗುಡ್ಲು ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಬರುತ್ತಿಲ್ಲವೆಂದು ಕೆ.ಎಸ್.ರ್.ಟಿ.ಸಿ ಬಸ್ ಅನ್ನು ಊರಿನ ಗ್ರಾಮಸ್ಥರು ತಡೆದು ಪ್ರತಿಭಟನೆ ನೆಡೆಸಿದ್ದಾರೆ.
ತುರುವೇಕೆರೆ ಡಿಪೋಗೆ ಸೇರಿದ ರಾಜ್ಯ ಸಾರಿಗೆ ಬಸ್ ಪ್ರತಿದಿನ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಶಿರಾಗೆ ತೆರಳುತ್ತಿತ್ತು, ಪ್ರತಿ ದಿನ ಸರಿಯಾಗಿ ಬೆಳಗ್ಗೆ 8:30 ರ ಸಮಯಕ್ಕೆ ಬಡಕೇಗುಡ್ಲು ಗ್ರಾಮಕ್ಕೆ ಬರುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಗಂಟೆ ಮುಂಚಿತವಾಗಿ ಅಂದರೆ ಬೆಳಗ್ಗೆ 7:30 ಕ್ಕೆ ಬರುತ್ತಿದೆ, ಒಂದು ಗಂಟೆ ಮುಂಚಿತವಾಗಿ ಬರುತ್ತಿರುವುದರಿಂದ ಶಾಲಾ ಮಕ್ಕಳಿಗೆ , ಕಾಲೇಜಿಗೆ, ಕೆಲಸಗಳಿಗೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಊರಿನ ಗ್ರಾಮಸ್ತರೆಲ್ಲ ಸೇರಿ ಇಂದು ಬಸ್ ಅನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ, ಹಾಗೂ ಸರಿಯಾಗಿ 8:30 ಕ್ಕೆ ಪ್ರೈವೇಟ್ ಬಸ್ ಬರುತ್ತಿದ್ದು ಇದು ಮೇಲ್ನೋಟಕ್ಕೆ ಪ್ರೈವೇಟ್ ಬಸ್ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.