ಚೇಳೂರು! ವಿಶೇಷವಾಗಿ ನಾಲ್ಕು ಕರುಗಳುಗೆ ಜನ್ಮ ನೀಡಿದ ಹಸು

ಚೇಳೂರು : ಒಂದೇ ಹಸು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ಘಟನೆ ಗುಬ್ಬಿ ತಾಲ್ಲೋಕಿನ ಚೇಳೂರು ಗ್ರಾಮದಲ್ಲಿ ನೆಡೆದಿದೆ.

ಚೇಳೂರು ಗ್ರಾಮದ ಮುನಿಯಪ್ಪನವರಿಗೆ ಸೇರಿದ ಹಸು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು ಆ ನಾಲ್ಕರಲ್ಲಿ 1 ಹೆಣ್ಣು 3 ಗಂಡು ಕರುಗಳಾಗಿ ಜನಿಸಿವೆ , ಹಸು ಮತ್ತು ಕರುಗಳು ಆರೋಗ್ಯದಿಂದಿವೆ.

ವಿಶೇಷವಾಗಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು ಮತ್ತು ಕರುಗಳನ್ನು ನೋಡಲು ಸುತ್ತ ಮುತ್ತಲಿನ ಜನ ಹಾಗೂ ಗ್ರಾಮಸ್ತರು ಬರುತ್ತಿದ್ದಾರೆ.