ಗ್ಯಾರಂಟಿ ಬಜೆಟ್ ! 8068 ಕೋಟಿ ಹೆಚ್ಚುವರಿ ಸಾಲ ಮಾಡಲಿರುವ ಸಿದ್ದರಾಮಯ್ಯ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ 14 ನೇ ದಾಖಲೆಯ 2023 – 24 ನೇ ವರ್ಷದ ಬಜೆಟ್ ಅನ್ನು ಮಂಡಿಸಿದ್ದಾರೆ, ಈ ಬಾರಿ ಹೊಸದಾಗಿ ಅನುಷ್ಠಾನವಾಗಲಿರುವ ಯೋಜನೆಗಳಿಗೆ ಕೋಟಿ ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ.

ಕಳೆದ ಫೆಬ್ರವರಿ 17 ರಂದು ಬಿಜೆಪಿ ಪಕ್ಷದ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಚುನಾವಣಾಪೂರ್ವ ಬಜೆಟ್ ಮಂಡನೆ ಮಾಡಿದ್ದರು ಆ ವೇಳೆ ಬಜೆಟ್ ನಲ್ಲಿ ಈ ವರ್ಷಕ್ಕೂ ಸೇರಿ 77,750 ಕೋಟಿ ರೂಗಳನ್ನು ಸಾಲ ಮಾಡಲಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಹೆಚ್ಚುವರಿ ಸಾಲ ಮಾಡಲು ತೀರ್ಮಾನಿಸಿದ್ದು ಒಟ್ಟು 8068 ರೂ ಗಳಷ್ಟು ಹೆಚ್ಚುವರಿ ಸಾಲವನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಗೆ ಶೇ 26ರಷ್ಟು ಹೆಚ್ಚುವರಿ ಸಾಲವನ್ನು ಮಾಡಲು ಮುಂದಾಗಿದ್ದಾರೆ , ಶೇ 4 ರಷ್ಟು ಕೇಂದ್ರ ಸರ್ಕಾರದಿಂದ ಅನುದಾನ ನಿರೀಕ್ಷಯಿದೆ , ಶೇ50 ರಷ್ಟು ಹಣವನ್ನು ತೆರಿಗೆ ಆದಾಯದಿಂದ ಹೊಂದಿಸಲು ನಿರ್ಧಾರ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈಗಾಗಲೇ ಅಬಕಾರಿ, ಮುದ್ರಾಂಕ ಶುಲ್ಕ, ರಾಯಲ್ಟಿ ಸೇರಿ ಹಲವು ಶುಲ್ಕಗಳು ಮತ್ತು ತೆರಿಗೆಯನ್ನು ಏರಿಕೆ ಮಾಡಿದ್ದು ದಿನ ನಿತ್ಯ ವಸ್ತುಗಳ ಮೇಲೆಭಾರಿ ಪ್ರಭಾವ ಬೀರುತ್ತಿದೆ, ಅಲ್ಲದೆ ಸಾಲದ ಹೊರೆಯನ್ನು ಸಹ ಜನ ಸಾಮಾನ್ಯರ ಮೇಲೆ ಹೇರಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನ ಮಾಡಿದೆ.