NHM ಯೋಜನೆಯಡಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ

ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಜುಲೈ 13 ರಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ, ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಆರ್. ಸಿ. ಎಚ್ ಅಧಿಕಾರಿಗಳ ಕಛೇರಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ ಹಳೇ ಟಿ. ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ ಇಂದಿರಾನಗರ ಬೆಂಗಳೂರು -38 ಇಲ್ಲಿಗೆ ಹಾಜರಾಗತಕ್ಕದ್ದು.

ಅಭ್ಯರ್ಥಿಗಳನ್ನು NHM ಮಾರ್ಗಸೂಚಿಯಂತೆ ರೋಸ್ಟರ್ ಕಮ್ ಮೆರಿಟ್ ಅನ್ವಯ ನೇಮಕಾತಿ ಮಾಡಿಕೊಳ್ಳಲಾಗುವುದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹ ಮೀಸಲಾತಿ ಅಭ್ಯರ್ಥಿಗಳು ಸಿಕ್ಕದಿದ್ದಲ್ಲಿ ಸಾಮಾನ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಈ ಗುತ್ತಿಗೆ ಆಧಾರದ ಅವಧಿ 31-03-2024 ರ ವರೆಗೆ ಇರುತ್ತದೆ.

ಹುದ್ದೆಗಳ ವಿವರ ಮತ್ತು ವೇತನ

  • ಆಬ್ಸ್ಟೆಟ್ರಿಕ್ಸ್‌ ಅಂಡ್ ಗೈನಾಕಾಲಜಿ : 01 (1,10,000 ರೂಗಳು)
  • ಪೀಡಿಯಾಟ್ರಿಷಿಯನ್ : 02 (1,10,000 ರೂಗಳು)
  • ಅರವಳಿಕೆ ತಜ್ಞ : 02 (1,10,000 ರೂಗಳು)
  • ಜೆನೆರಲ್ ಸರ್ಜನ್ : 01 ( 1,10,000 ರೂಗಳು)
  • ಮೆಡಿಕಲ್ ಆಫೀಸರ್ – ಹ್ಯೂಮನ್ ಮಿಲ್ಕ್‌ ಬ್ಯಾಂಕ್ : 01 (60,000 ರೂಗಳು)
  • ಆರ್‌ಬಿಎಸ್‌ಕೆ ಮೆಡಿಕಲ್ ಅಫೀಸರ್ : 02 (25,000 ರೂಗಳು)
  • ಫಾರ್ಮಾಸಿಸ್ಟ್ / ಆಪ್ತಲ್ಮಿಕ್ ಅಸಿಸ್ಟಂಟ್ : 02 (13,800 ರೂಗಳು)
  • ಆಪಿಟೊಮೆಟ್ರಿಸ್ಟ್ :01 (12,679 ರೂಗಳು)
  • RMNCHA ಕೌನ್ಸಿಲರ್ : 01 (15,939 ರೂಗಳು)
  • ಲ್ಯಾಬ್ ಟೆಕ್ನಾಲಜಿಸ್ಟ್ ಆಫೀಸರ್ : 01 (16,100 ರೂಗಳು)
  • ಆಯುಷ್ ಸ್ಟಾಫ್ ನರ್ಸ್ : 01 (11,500 ರೂಗಳು)
  • ಆಯುಷ್ ತೆರಪಿಸ್ಟ್ : 01 (12,128 ರೂಗಳು)
  • ಕಿವುಡು ಮಕ್ಕಳ ಮಾರ್ಗಸೂಚಕ :01 (15,000 ರೂಗಳು)
  • ಡಯಟ್ ಕೌನ್ಸಿಲರ್ : 01 (15,939 ರೂಗಳು)
  • ಇ – ಪ್ರೋಗ್ರಾಮರ್ : 01 (29,000 ರೂಗಳು)
  • ಟೆಕ್ನಿಕಲ್ ಆಫೀಸರ್ : 01 (25,000 ರೂಗಳು)

ಅಭ್ಯರ್ಥಿಗಳನ್ನು ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.