ಭಾರತೀಯ ಬಾಹ್ಯಕಾಶ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ 3 ಅನ್ನು ಜುಲೈ 14 ರಂದು ಶ್ರೀಹರಿಕೋಟದ ಬಾಹ್ಯಕಾಶ ಕೇಂದ್ರದಲ್ಲಿ ಉಡಾವಣೆಯಾಗಲಿದೆ.
ಭಾರತದ ಚಂದ್ರಯಾನ 3 ಶುಕ್ರವಾರ ಉಡಾವಣೆಗೆ ಸಿದ್ದವಾಗಿರುವುದರಿಂದ ಶ್ರಿಹರಿಕೋಟದ ಸುತ್ತ ಮುತ್ತ ನಿರ್ಮಾಣ ಹಾಗೂ ಅಗೆಯುವ ಕೆಲಸಗಳಿ ನಿಷೇಧ ಹೇರಲಾಗಿದೆ. ರಾಕೆಟ್ ಅನ್ನು ಜುಲೈ 14 ರಂದು ಅಪರಾಹ್ನ 2:35 ಕ್ಕೆ ಉಡಾವಣೆ ಮಾಡಲಾಗುತ್ತದೆ ಎಲ್ಲವೂ ಸರಿಯಾಗಿ ನೆಡೆದರೆ ಆಗಸ್ಟ್ 23 ಕ್ಕೆ ಚಂದ್ರನ ಮೇಲೆ ಇಳಿಯಲಿದೆ ಚಂದ್ರನ ಮೇಲೆ ಸೂರ್ಯೋದಯ ಯಾವಾಗ ಎಂಬುದರ ಮೇಲೆ ದಿನಾಂಕವನ್ನು ಖಚಿತಪಡಿಸಲಾಗುತ್ತದೆ, ಒಂದು ವೇಳೆ ಲ್ಯಾಂಡಿಂಗ್ ವಿಳಂಬವಾದರೆ ಮುಂದಿನ ತಿಂಗಳಾದ ಸೆಪ್ಟೆಂಬರ್ ನಲ್ಲಿ ಇಳಿಸುವ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ISRO ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ.