ಭವಿಷ್ಯದ ಮುನ್ನುಡಿಯತ್ತ ಚಂದ್ರಯಾನ 3 ! ಯಶಸ್ವಿ ಉಡಾವಣೆ

ಭಾರತದ ಪ್ರತಿಷ್ಟಿತ ಯೋಜನೆಯಾದ ಚಂದ್ರಯಾನ 3 ನೌಕೆ ಇಂದು ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿ ನೌಕೆಯು ಚಂದ್ರನ ದಕ್ಷಿಣ ಭಾಗದ ಕಕ್ಷಗೆ ಸುಸೂತ್ರವಾಗಿ ಸೇರಿದೆ.

ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ ಅಂತ್ಯದಲ್ಲಿ ನಡೆಯಲಿದೆ, ಇದು ಯಶಸ್ವಿಯಾದರೆ ಭವಿಷ್ಯದ ಅಂತರ ಗ್ರಹ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಂದ್ರಯಾನ-3 ಮಿಷನ್ ದೇಶೀಯ ಪೊಪಲ್ಟನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಒಳಗೊಂಡಿರುತ್ತದೆ, ಇದು ಅಂತರಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.

ಎಲ್‌ವಿಎಂ-3 ಉಡಾಹಕ ಚಂದ್ರಯಾನನೌಕೆಯನ್ನು ಜಿಯೋ ಟ್ರಾನ್ಸ್‌ಫರ್ ಆರ್ಬಿಟ್‌ಗೆ ತಲುಪಿಸಲಿದೆ. ಸಂಕೀರ್ಣ ಕಾರ್ಯಾಚರಣೆಗಳಿಗೆ ಎಲ್‌ವಿಎಂ-3 ಉಡಾಹಕ ಬಳಕೆ ಮಾಡಲಾಗುತ್ತದೆ, ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಉಪಗ್ರಹಗಳನ್ನು ಸಾಗಿಸುವ ಅತಿದೊಡ್ಡ ಮತ್ತು ಭಾರವಾದ ಉಡಾವಣಾ ವಾಹನವಾಗಿದೆ. ಚಂದ್ರನ ಭೂಪ್ರದೇಶದಲ್ಲಿ ಈ ರೋವರ್ ಪರ್ಯಟನೆಮಾಡಿ, ಹಲವು ಸಂಶೋಧನೆಗಳನ್ನು ನಡೆಸಲಿದೆ. ಅಲ್ಲಿನ ಮಾಹಿತಿ,ದತ್ತಾಂಶಗಳನ್ನು ಇಸ್ರೋ ನಿಯಂತ್ರಣ ಕೇಂದ್ರಕ್ಕೆ ರವಾನೆ ಮಾಡಲಿದೆ. ಒಟ್ಟಾರೆ 600 ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆ ಇದಾಗಿದೆ.