ತುಮಕೂರು ! 2 ದಿನಗಳ ಕಾಲ ಮಧ್ಯ ಮಾರಾಟ ನಿಷೇಧ

ತುಮಕೂರು: ರಾಜ್ಯ ಚುನಾವಣಾ ಆಯೋಗವು ತುಮಕೂರು ಜಿಲ್ಲೆಯ ಗ್ರಾಮಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಸಲಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಆದೇಶಿಸಿದ್ದಾರೆ.

ಜುಲೈ 21, 2023ರ ಸಂಜೆ 5 ಗಂಟೆಯಿಂದ ಜುಲೈ 23ರ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯುವ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧದ ಮಧ್ಯದಂಗಡಿಗಳನ್ನು ಮುಚ್ಚಲಾಗಿರುತ್ತದೆ, ಒಂದು ವೇಳೆ ಸದರಿ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿ ಚುನಾವಣೆ ನಡೆಯದಿದ್ದಲ್ಲಿ ಈ ಆದೇಶವು ಅನ್ವಯವಾಗುವುದಿಲ್ಲವೆಂದು ಅವರು ಆದೇಶಿಸಿದ್ದಾರೆ.