ತುಮಕೂರು: ಅರಣ್ಯ ಇಲಾಖೆಯಲ್ಲಿ ಬೆಳೆಸಿದ ಸಸಿಗಳನ್ನು ಸಾರ್ವಜನಿಕರಿಗೆ / ರೈತರಿಗೆ ದರಗಳನ್ನು ಪರಿಷ್ಕರಿಸಿ ಮಾರಾಟ ಮಾಡಲು ಜುಲೈ 14, 2023 ರಿಂದ ಜಾರಿಗೆ ಬರುವಂತೆ ತುಮಕೂರು ಜಿಲ್ಲಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ದರಗಳನ್ನು ಪರಿಷ್ಕರಿಸಿ ತುಮಕೂರು ಜಿಲ್ಲೆಯ ಪ್ರತಿ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಅರಣ್ಯ ಸಸ್ಯ ಕ್ಷೇತ್ರಗಳಲ್ಲಿ ಆರ್‌ಎಸ್‌ಪಿಡಿ ಯೋಜನೆಯಡಿ ಸಾರ್ವಜನಿಕರಿಗೆ/ರೈತರಿಗೆ ಬೆಳೆಸಿದ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ.
- 5×8 ಗಾತ್ರದ ಸಸಿಗೆ 2 ರೂ.
- 6×9 ಗಾತ್ರದ ಸಸಿಗೆ 3 ರೂ.
- 8×12 ಗಾತ್ರದ ಸಸಿಗೆ 6 ರೂ.
ದರಗಳನ್ನು ನಿಗಧಿಪಡಿಸಿ ಮಾರಾಟ ಮಾಡಲಾಗುತ್ತಿದೆ.