ಗಲಾಟೆ ನಡುವೆ ಕುಸಿದು ಬಿದ್ದ ಶಾಸಕ ಯತ್ನಾಳ್

ವಿಧಾನಸಭಾ ಅಧಿವೇಶನದಿಂದ ಅಮಾನತುಗೊಂಡ 10 ಶಾಸಕರನ್ನು ಮಾರ್ಷಲ್‌ಗೆ ಸಿಗದಂತೆ ಬಹುಕಾಲ ರಕ್ಷಿಸಿದ ಬಸವನಗೌಡ ಪಾಟೀಲ್ ಅವರು ಸ್ಪೀಕರ್ ಕೊಠಡಿ ಮುಂದೆಯೂ ಸಹ ಧರಣಿಯಲ್ಲಿ ಪಾಲ್ಗೊಂಡು ತಳ್ಳಾಟದಲ್ಲಿ ಸಿಲುಕಿದರು. ಈ ವೇಳೆ ಮಾರ್ಷಲ್ ಎಳೆದಾಟದಿಂದಾಗಿ ಬಿಪಿ ಹೆಚ್ಚಾಗಿ ಅಲ್ಲೇ ಕುಸಿದುಬಿದ್ದರು. ತಕ್ಷಣವೇ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು .

ನಾನು ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ, ಇನ್ನೆರಡು ದಿನಗಳಲ್ಲಿ ಕಾರ್ಯಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ, ತಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು ಎಂದು ಬಸವನಗೌಡ ಪಾಟೀಲ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.