ದೇಶದ ನಂ.1 ಶ್ರೀಮಂತ ಶಾಸಕನ ಪಟ್ಟ ಅಲಂಕರಿಸಿದ ಡಿ. ಕೆ. ಶಿವಕುಮಾರ್

ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ಸಂಸ್ಥೆ ಬಿಡುಗಡೆ ಮಾಡಿದ್ದು ಟಾಪ್ 10 ರಲ್ಲಿ 4 ಸ್ಥಾನಗಳನ್ನು ಕರ್ನಾಟಕದ ಶಾಸಕರು ಅಲಂಕಾರಿಸಿದ್ದಾರೆ, ಭಾರತದ ನಂ.1 ಶ್ರೀಮಂತ ಶಾಸಕರ ಪಟ್ಟವನ್ನು ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಮುಡಿಗೇರಿಸಿಕೊಂಡಿದ್ದಾರೆ.

ಭಾರತದ ಟಾಪ್ 10 ಶ್ರೀಮಂತ ಶಾಸಕರು

  • ಡಿ. ಕೆ ಶಿವಕುಮಾರ್, ಕನಕಪುರ ಕ್ಷೇತ್ರ (1413 ಕೋಟಿ ರೂ ಆಸ್ತಿ)
  • ಕೆ. ಎಚ್. ಪುಟ್ಟಸ್ವಾಮಿ ಗೌಡ, ಗೌರಿಬಿದನೂರು ಕ್ಷೇತ್ರ (1267 ಕೋಟಿ ರೂ ಆಸ್ತಿ)
  • ಪ್ರಿಯಕೃಷ್ಣ , ಗೋವಿಂದರಾಜನಗರ ಕ್ಷೇತ್ರ (1156 ಕೋಟಿ ರೂ ಆಸ್ತಿ)
  • ಎನ್. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ (688 ಕೋಟಿ ರೂ ಆಸ್ತಿ)
  • ಜಯಂತಿಬಾಯ್ ಸೋಮಬಾಯ್ ಪಟೇಲ್, ಗುಜರಾತ್ (661 ಕೋಟಿ ರೂ ಆಸ್ತಿ)
  • ಬಿ. ಎಸ್. ಸುರೇಶ್ , ಹೆಬ್ಬಾಳ್ (648 ಕೋಟಿ ರೂ ಆಸ್ತಿ)
  • ವೈ. ಎಸ್. ಜಗನ್ ಮೋಹನ್ ರೆಡ್ಡಿ, ಆಂಧ್ರಪ್ರದೇಶ (510 ಕೋಟಿ ರೂ)
  • ಪರಾಗ್ ಶಾ , ಮಹಾರಾಷ್ಟ್ರ (500 ಕೋಟಿ ರೂ ಆಸ್ತಿ)
  • ಟಿ. ಎಸ್. ಬಾಬು , ಛತ್ತೀಸ್ಗಡ ( 500 ಕೋಟಿ ರೂ)
  • ಮಂಗಳ್ ಪ್ರಭಾತ್ ಲೋಧ, ಮಹಾರಾಷ್ಟ್ರ (441 ಕೋಟಿ ರೂ)

ಇದಿಷ್ಟು ಅಧಿಕೃತ ಮಾಹಿತಿ ಪ್ರಕಾರ ಶಾಸಕರುಗಳು ಹೊಂದಿರುವ ಆಸ್ತಿಗಳ ವಿವರ, ಆದರೆ ಘೋಷಣೆಯಾಗಿರುವ ಅಧಿಕೃತ ಆಸ್ತಿಯನ್ನು ಹೊರತುಪಡಿಸಿದರೆ ಇದಕ್ಕಿಂತ 10 ಪಟ್ಟು ಹೆಚ್ಚು ಆಸ್ತಿಯನ್ನು ಇವರುಗಳು ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.